ADVERTISEMENT

ಹೈಟೆನ್ಷನ್ ವೈರ್ ಬಿದ್ದು ಸ್ಥಳದಲ್ಲೇ ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 12:28 IST
Last Updated 15 ಏಪ್ರಿಲ್ 2025, 12:28 IST
   

ಯಾದಗಿರಿ: ತುಂಡರಿಸಿ ಬಿದ್ದ ಹೈಟೆನ್ಷನ್ ವೈರ್ ತಗುಲಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಮಾತಾ ಮಾಣಿಕೇಶ್ವರಿ ನಗರದಲ್ಲಿ ಮಂಗಳವಾರ ನಡೆದಿದೆ.

ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದ ನಿವಾಸಿ ಖಾಜಾ ಪಟೇಲ್ (21) ಮೃತಪಟ್ಟವರು.

ನಗರದ ಮಾತಾ ಮಾಣಿಕೇಶ್ವರಿ ನಗರದ ಸಹೋದರಿಗೆ ಮನೆಗೆ ಪಟೇಲ್‌ ಭೇಟಿ ನೀಡುವಾಗ ಏಕಾಏಕಿ ಜೆಸ್ಕಾಂ ವೈರ್‌ ತುಂಡರಿಸಿ ಬಿದ್ದಿದೆ. ಇದನ್ನು ತಿಳಿಯದೇ ಬೈಕ್‌ ಸವಾರ ಹೋಗಿದ್ದು, ಆತನ ಮೇಲೆ ಬಿದ್ದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಭೇಟಿ ನೀಡಿದ್ದಾರೆ.

ADVERTISEMENT

ಜೀವ ತೆಗೆದ ಹೆಲ್ಮೆಟ್‌?:

‘ಘಟನೆ ದುರದೃಷ್ಟಕರ. 11 ಕೆವಿ ವಿದ್ಯುತ್‌ ಪ್ರವಹಿಸುತ್ತಿತ್ತು. ವೈಯರ್‌ ಬಿದ್ದು, ಯುವಕ ಸಾವನ್ನಪ್ಪಿದ್ದಾನೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಘವೇಂದ್ರ ತಿಳಿಸಿದ್ದಾರೆ.

‘ಯುವಕ ಹೆಲ್ಮೆಟ್‌ ಧರಿಸಿದ್ದು, ತುಂಡರಿಸಿದ ವೈರ್‌ ಕಾಣದೇ ಇರುವ ಕಾರಣ ಅವಘಡ ಸಂಭವಿಸಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.