ADVERTISEMENT

ಕಾಲುವೆಗೆ ಜಾರಿದ ಎತ್ತಿನ ಬಂಡಿ: ಎತ್ತು ಕಣ್ಮರೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 16:32 IST
Last Updated 3 ಫೆಬ್ರುವರಿ 2025, 16:32 IST

ಹುಣಸಗಿ:ತಾಲ್ಲೂಕಿನ ಮುದನೂರು ಗ್ರಾಮದ ಬಳಿ ಸೋಮವಾರ ಮುಖ್ಯಕಾಲುವೆಗೆ ಎತ್ತಿನ ಬಂಡಿ ಉರುಳಿದ್ದು, ಒಂದು ಎತ್ತು ನೀರು ಪಾಲಾಗಿದೆ.

ಮತ್ತೊಂದು ಎತ್ತು ಹಾಗೂ ರೈತ ಘಟನೆಯಲ್ಲಿ ಪಾರಾಗಿದ್ದಾರೆ.  ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಸ್ಪಿಂಕ್ಲರ್ ಪೈಪ್‌ಗಳನ್ನು ಹಾಗೂ ತೊಗರಿಯನ್ನು ಸಾಗಿಸುವ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ರೈತ ಪರಮಣ್ಣ ಹೇಳಿದರು.

ಕಾಲುವೆ ಬಳಿ ಬಂಡಿ ಹೋಗುತ್ತಿದ್ದಂತೆ ನೀರಿನ ರಭಸಕ್ಕೆ ಎತ್ತುಗಳು ಬೆದರಿದವು. ತಕ್ಷಣಕ್ಕೆ ಎತ್ತು ಕಾಲುವೆಯತ್ತ ಹೊರಡುವುದನ್ನು ಅರಿತು ಒಂದು ಎತ್ತಿನ ಕುಣಿಕೆ ಬಿಚ್ಚಲಾಯಿತು. ಇನ್ನೊಂದು ಬಿಚ್ಚುವಷ್ಟರಲ್ಲಿ ನೀರಿಗೆ ಜಾರಿತು ಎಂದು ಹೇಳಿದರು.

ADVERTISEMENT

ಎತ್ತಿನ ಬಂಡಿಯಲ್ಲಿ ನೂರಕ್ಕೂ ಹೆಚ್ಚು ಸ್ಪಿಕ್ಲರ್ ಪೈಪ್‌ಗಳು ಹಾಗೂ 4 ತೊಗರಿ ಚೀಲಗಳು ಇದ್ದವು ಎಂದು ಮಲ್ಲಿಕಾರ್ಜುನ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.