ADVERTISEMENT

ಹುಣಸಗಿ: ವಿದ್ಯಾರ್ಥಿಗಳಿಗಾಗಿ ಬಸ್ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:11 IST
Last Updated 25 ಜುಲೈ 2024, 14:11 IST
ಹುಣಸಗಿ ತಾಲ್ಲೂಕಿನ ಸದಬ ಗ್ರಾಮಕ್ಕೆ ಆಗಮಿಸಿದ ಸಾರಿಗೆ ಸಂಸ್ಥೆಯ ಬಸ್‌ಗೆ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು
ಹುಣಸಗಿ ತಾಲ್ಲೂಕಿನ ಸದಬ ಗ್ರಾಮಕ್ಕೆ ಆಗಮಿಸಿದ ಸಾರಿಗೆ ಸಂಸ್ಥೆಯ ಬಸ್‌ಗೆ ಪೂಜೆ ಸಲ್ಲಿಸಿ ಸ್ವಾಗತಿಸಲಾಯಿತು   

ಹುಣಸಗಿ: ತಾಲ್ಲೂಕಿನ ಸದಬ ಹಾಗೂ ಅರಕೇರಾ (ಜೆ) ಸೇರಿದಂತೆ ಇತರ ಗ್ರಾಮದ ವಿದ್ಯಾರ್ಥಿಗಳು ಸಾರಿಗೆ ಬಸ್‌ಗೆ ಪೂಜೆ ಸಲ್ಲಿಸಿ ತಮ್ಮ ಗ್ರಾಮಕ್ಕೆ ಸ್ವಾಗತಿಸಿ ಸಂಭ್ರಮಿಸಿದರು.

ಸದಬ ಹಾಗೂ ಅರಕೇರಾ(ಜೆ) ಸೇರಿದಂತೆ ಇತರ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಅವಧಿಗೆ ಸಮಯಕ್ಕೆ ಸರಿಯಾಗಿ ತೆರಳಲು ಬಸ್ ವ್ಯವಸ್ಥೆ ಇರಲಿಲ್ಲ. ಈ ವಿಷಯವನ್ನು ಸ್ಥಳಿಯ ಮುಖಂಡರು ಹಾಗೂ ಕೆಲ ವಿದ್ಯಾರ್ಥಿಗಳು ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾತನಾಡಿ, ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಇದು ಸಾಕಷ್ಟು ಅನುಕೂಲವಾಗಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧಕ್ಷ ಗೋಪಾಲ ದೊರೆ ಅಮಲಿಹಾಳ ತಿಳಿಸಿದರು.

ಮುಖಂಡರಾದ ತಮ್ಮಣ್ಣ ಚೌದ್ರಿ, ಸಿದ್ದನಗೌಡ ಪೊಲೀಸ್‌ಪಾಟೀಲ, ಮಲ್ಲಯ್ಯ ಸ್ವಾಮಿ ಹಿರೇಮಠ, ಬಸವರಾಜ ದೇಸಾಯಿ ಹಾಗೂ ನಬಿ ಪಟೇಲ್, ಸಾಯಬಣ್ಣ ಚೌದ್ರಿ, ಮದಾರಶಾ ಮಕಾನದಾರ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.