ADVERTISEMENT

ನೆನಪಿನ ಶಕ್ತಿ ಹೆಚ್ಚಿಸುವ ಚೆಸ್: ಶರಣಪ್ಪ ಸಲಾದಪುರ

17 ವರ್ಷದ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಚೆಕ್ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:23 IST
Last Updated 4 ನವೆಂಬರ್ 2025, 7:23 IST
3ಎಸ್ಎಚ್ಪಿ 1 ಶಹಾಪುರ ನಗರದ ಸರ್ಕಾರಿ ಮಾದರಿ ಕಾಲೇಜಿನಲ್ಲಿ ಸೋಮವಾರ ಸಭಾಂಗಣದಲ್ಲಿ ನಡೆಯುತ್ತಿರುವ ರಾಜ್ಯಟ್ಟದ ಚೆಕ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
3ಎಸ್ಎಚ್ಪಿ 1 ಶಹಾಪುರ ನಗರದ ಸರ್ಕಾರಿ ಮಾದರಿ ಕಾಲೇಜಿನಲ್ಲಿ ಸೋಮವಾರ ಸಭಾಂಗಣದಲ್ಲಿ ನಡೆಯುತ್ತಿರುವ ರಾಜ್ಯಟ್ಟದ ಚೆಕ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು   

ಶಹಾಪುರ: ‘ನೆನಪಿನ ಶಕ್ತಿಯನ್ನು ಹೆಚ್ಚಿಸುವ ಹಾಗೂ ವ್ಯಕ್ತಿತ್ವ ಬೆಳೆಸುವ ಶಕ್ತಿ ಚೆಸ್ ಪಂದ್ಯಕ್ಕಿದೆ. ಏಕಾಗ್ರತೆ, ಅತ್ಯಂತ ಸಂಯಮದಿಂದ ಆಡುವ ಕ್ರೀಡೆ ಇದಾಗಿದೆ‘ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.

ನಗರದ ಸರ್ಕಾರಿ ಮಾದರಿ ಪದವಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಚೇರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ 17 ವರ್ಷದ ಒಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚೆಸ್‌ ಕ್ರೀಡೆಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಸೋಲು–ಗೆಲುವು ಎರಡನ್ನು ಆನಂದವಾಗಿ ಅನುಭವಿಸುವ ಮೂಲಕ ಕ್ರೀಡಾ ಸ್ಫೂರ್ತಿಗೆ ಮೇಲ್ಪಂಕ್ತಿಯಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಪಠ್ಯ ಚಟುವಟಿಕೆಗೆ ನೀಡಿದ ಮಹತ್ವ ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ದೈಹಿಕ ಕ್ಷಮತೆ ಹೆಚ್ಚಿಸಲು ಕ್ರೀಡೆಗಳು ಪೂರಕವಾಗಿವೆ. ಕ್ರೀಡೆಯಿಂದ ಮಾತ್ರ ಸಮೃದ್ಧ ಭಾರತ ನಿರ್ಮಾಣ ಸಾಧ್ಯ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಕ್ರೀಡಾಪಟುಗಳು ಉತ್ಸುಕತೆಯಿಂದ ಭಾಗವಹಿಸಿ, ಸಗರನಾಡಿಗೆ ಶ್ರೇಯಸ್ಸು ತರಬೇಕು’ ಎಂದರು.

ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾತನಾಡಿ, ‘ರಾಜ್ಯದ ವಿವಿಧ ಜಿಲ್ಲೆಗಳಿಂದ ಚೆಸ್ ಸ್ಪರ್ಧಾಳುಗಳು ಬಂದಿದ್ದು, ಕಳೆದ ಹತ್ತು ದಿನಗಳಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ನ.5ರವರೆಗೆ ಪಂದ್ಯಾವಳಿ ನಡೆಯಲಿವೆ’ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪುರ, ಉಪನಿರ್ದೇಶಕ (ಅಭಿವೃದ್ಧಿ) ವೃಷಭೇಂದ್ರಯ್ಯ, ಬಿಇಒ ವೈ.ಎಸ್ ಹರಗಿ, ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ, ಅನಿಲಕುಮಾರ ನಾಯಕ, ಶರಣಪ್ಪ ಪಾಟೀಲ, ಕಾಲೇಜಿನ ಪ್ರಾಚಾರ್ಯ ಸಿದ್ದಣ್ಣ, ಸಂತೋಷ, ಬಿಆರ್‌ಸಿ ರೇಣುಕಾ ಪಾಟೀಲ, ಹನುಮಂತರಾಯ ಸೋಮಾಪುರ, ಜಗದೀಶ ಗೋಟ್ಲಾ, ಲಕ್ಷ್ಮಣ ಲಾಳಸೇರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.