ADVERTISEMENT

ಶಿಥಿಲಾವಸ್ಥೆಗೆ ತಲುಪಿದ ಶಾಲಾ ಕೊಠಡಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 15:26 IST
Last Updated 12 ನವೆಂಬರ್ 2019, 15:26 IST
ಯರಗೋಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿರುವುದು
ಯರಗೋಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿರುವುದು   

ಯರಗೋಳ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಸಿಯುವ ಹಂತ ತಲುಪಿದೆ. ಪ್ರತಿದಿನ ಕಟ್ಟಡದ ಛಾವಣಿಯ ಸಿಮೆಂಟ್‌ ಕುಸಿದು ಬೀಳುತ್ತಿದೆ. ಇದು ಮಕ್ಕಳಲ್ಲಿ ಹಾಗೂ ಸಿಬ್ಬಂದಿ ವರ್ಗದಲ್ಲಿ ಆತಂಕ ಉಂಟು ಮಾಡಿದೆ.

ಯರಗೋಳ ಗ್ರಾಮದ ವಾರ್ಡ್ ಸಂಖ್ಯೆ 4ರಲ್ಲಿ ಈ ಶಾಲೆ ಇದೆ. 5 ದಶಕಗಳಿಗೂ ಹಳೆಯ ಕಟ್ಟಡವನ್ನು ಶಾಲೆ ಹೊಂದಿದೆ. 520 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 10 ಜನ ಶಿಕ್ಷಕರಿದ್ದಾರೆ. 17 ಕೊಠಡಿಗಳಿದ್ದು, 12 ಕೊಠಡಿಗಳ ಮೇಲ್ಚಾವಣಿಗಳು ಶಿಥಿಲಾವಸ್ಥೆಗೆ ತಲುಪಿವೆ. 5 ಕೋಣೆಗಳು ಸುಸ್ಥಿತಿಯಲ್ಲಿವೆ.

ಮಳೆಗಾಲದಲ್ಲಿ ತರಗತಿ ಕೊಠಡಿಗಳು ಸೋರುತ್ತವೆ. ಪ್ರತಿದಿನ ಮೇಲ್ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು, ಆತಂಕದಲ್ಲಿಯೇ ಪಾಠ ಕೇಳುವಂತ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಈಚೆಗೆ ಮುಖ್ಯ ಶಿಕ್ಷಕರ ಕೋಣೆಯ ಮೇಲ್ಛಾವಣಿ ಕುಸಿದು ಬಿದ್ದು ಕುರ್ಚಿ, ಟೇಬಲ್‌ಗಳು ಜಖಂಗೊಂಡಿವೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ, ಸರಿಪಡಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ಶಾಲೆಯ ಕೋಣೇಗಳನ್ನು ದುರಸ್ತಿಪಡಿಸಬೇಕು ಎಂದು ಮುಖ್ಯ ಶಿಕ್ಷಕರು ಮೂರು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು, ಮನವಿ ಮಾಡಿದ್ದಾರೆ. ಆದರೂ ಇದುವರೆಗೂ ಉತ್ತರ ಬಂದಿಲ್ಲ.

ಪಾಲಕ ಸಲೀಂ ಪಾಷಾ ಮಾತನಾಡಿ,‘ಕೋಣೆಗಳ ಮೇಲ್ಛಾವಣಿ ಕುಸಿದು ಬೀಳುತ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ’ ಎಂದು ಹೇಳಿದರು.

ಯುವಕ ಸಾಬಣ್ಣ ಬಾನರ್ ಮಾತನಾಡಿ,‘ದುರಂತ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಕಟ್ಟಡ ದುರಸ್ತಿ ಮಾಡಿದರೆ ಒಳ್ಳೆಯದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.