ADVERTISEMENT

ಗುಂಡಿ ತಪ್ಪಿಸುವ ಯತ್ನದಲ್ಲಿ ಅಪಘಾತ, ಮಹಿಳೆ ಸಾವು ಪ್ರಕರಣದ ತನಿಖೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 8:59 IST
Last Updated 19 ಅಕ್ಟೋಬರ್ 2022, 8:59 IST
   

ಯಾದಗಿರಿ: ಬೆಂಗಳೂರು ಗುಂಡಿ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದೆ. ಗುಂಡಿ ಮುಚ್ಚಿಸಲು ಹೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಹಿಂದೆ ಆಡಳಿತ ಮಾಡಿದ್ದರು‌. ಆಗಲೂ ಗುಂಡಿ ಬಿದ್ದಿದ್ದವು. ಅವರು ಆರೋಪ ಮಾಡುವುದರಲ್ಲಿ ಹುರಳಿಲ್ಲ ಎಂದು ಹೇಳಿದರು.

ADVERTISEMENT

ಈಗಾಗಲೇ ಪಿಎಸ್ ಐ ಹಗರಣದಲ್ಲಿ ಸಿಐಡಿಯವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಖ್ಯಮಂತ್ರಿಗೆ ಧಮ್ ಇದ್ದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲಿನ ಆರೋಪಗಳನ್ನು ತನಿಖೆ ಮಾಡಿಸಲಿ ಎನ್ನುವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಣ್ಣು ತೆರೆದು ನೋಡಲಿ ಎಂದು ಅವರಿಗೆ ಫೈಲ್ ಕೊಡುತ್ತೇವೆ. ಸಿದ್ದರಾಮಯ್ಯ ಸರ್ಕಾರದ ಹಗರಣಗಳು ಅವರಿಗೂ ಗೊತ್ತಾಗಲಿ ಎಂದರು.

ಪೇ ಸಿಎಂ ಸೇ ಸಿಎಂ ಅಭಿಯಾನ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಕಾಂಗ್ರೆಸ್ ನವರಿಗೆ ಮಾಡಲು ಉದ್ಯೋಗ ಇಲ್ಲ. ಅವರು ಮಾತನಾಡುತ್ತಾರೆ ಮಾತನಾಡಲಿ. ನಮಗೆ ಜವಾಬ್ದಾರಿ ಇದೆ, ಜನಪರ ಕಾಳಜಿ ಇದೆ.
ನಾವು ಮಾತನಾಡುವುದಕ್ಕಿಂತ ಕೆಲಸ ಮಾಡುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.