ADVERTISEMENT

ಶಾಂತಿ, ಸಹಬಾಳ್ವೆಯಿಂದ ಬಕ್ರಿದ್ ಆಚರಿಸಿ; ಪಿಐ ಖಾಜಾ ಹುಸೇನ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:15 IST
Last Updated 7 ಜುಲೈ 2022, 4:15 IST
ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಬುಧವಾರ ಬಕ್ರೀದ್ ಪೂರ್ವಭಾವಿ ಶಾಂತಿಸಭೆಯಲ್ಲಿ ಪಿಐ ಖಾಜಾ ಹುಸೇನ್ ಮಾತನಾಡಿದರು
ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಬುಧವಾರ ಬಕ್ರೀದ್ ಪೂರ್ವಭಾವಿ ಶಾಂತಿಸಭೆಯಲ್ಲಿ ಪಿಐ ಖಾಜಾ ಹುಸೇನ್ ಮಾತನಾಡಿದರು   

ಗುರುಮಠಕಲ್: ‘ನಮ್ಮ ಠಾಣಾ ವ್ಯಾಪ್ತಿಯಲ್ಲಿ ಮತೀಯ ಕಾರಣದ ಸಮಸ್ಯೆಗಳು ಜರುಗಿಲ್ಲ. ಈ ಭಾಗದ ಜನ ಸೋದರತೆ, ಸಹಭಾಗಿತ್ವದಿಂದ ಪರಸ್ಪರರ ಹಬ್ಬ ಮತ್ತು ಧಾರ್ಮಿಕ ಕಾರ್ಯಕ್ರಮ ಆಚರಿಸುತ್ತಾರೆ. ಈ ವರ್ಷವೂ ಸಹ ಬಕ್ರಿದ್ ಸಮಯದಲ್ಲಿ ನಮ್ಮ ಪರಂಪರೆಯನ್ನು ಮುಂದುವರೆಸೋಣ’ ಎಂದು ಪಿಐ ಖಾಜಾ ಹುಸೇನ್ ಕರೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಜರುಗಿದ ಬಕ್ರೀದ್ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಒಂದು ಸಮುದಾಯದ ಹಬ್ಬ ಇನ್ನೊಬ್ಬರಿಗೆ ಸಮಸ್ಯೆಯನ್ನು ಉಂಟುಮಾಡುವಂತೆ ಇರಬಾರದು.
ಹಬ್ಬದ ಹಿನ್ನಲೆ ಸಾಮೂಹಿಕ ಪ್ರಾರ್ಥನೆ ಎಲ್ಲಿ ಮಾಡಲಿದ್ದೀರಿ ಎನ್ನುವ ಮಾಹಿತಿಯನ್ನು ಇಲಾಖೆಗೆ ನೀಡಿ, ಕಾನೂನಿನಲ್ಲಿ ಅವಕಾಶ ನೀಡಿದಷ್ಟು ಮಾತ್ರ ಬಳಕೆ ಮಾಡಿಕೊಳ್ಳಿ, ಹೆಚ್ಚಿನ ಶಬ್ದ ಬರುವ ಧ್ವನಿವರ್ಧಕ ಬಳಕೆ ಬೇಡ, ಕಾನೂನಿನಲ್ಲಿ ಸೂಚಿಸಿದ ಪ್ರಾಣಿಗಳನ್ನು ಮಾತ್ರ ಬಲಿ ನೀಡುವುದು, ಗಾಳಿಸುದ್ದಿಗಳು ಹರಡಿಸಿದರೆ ಕೂಡಲೆ ಇಲಾಖೆಗೆ ತಿಳಿಸಿ ಮತ್ತು ಅಂತಹ ಸುದ್ದಿ ನಂಬಬೇಡಿ ಎಂದು ಕೋರಿದರು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಪಿ.ಎಸ್.ಐ. ಶಿವಲಿಂಗಪ್ಪ, ಉಪತಹಶೀಲ್ದಾರ್ ಎಜಾಜ್ ಉಲ್ ಹಕ್, ಚಂದುಲಾಲ್ ಚೌದ್ರಿ, ಜಗದೀಶ ಮೇಂಗಜಿ, ಅಕ್ಬರ್ ಸೇಠ್, ಖಾನ್ ಸಾಬ್, ಫಯಾಜ್ ಅಹ್ಮದ್, ಅಹ್ಮದ್ ಅನ್ವರ್, ಬಾಬಾ, ಶರಣಗೌಡ ಎಲ್ಹೇರಿ, ವಿನಾಯಕ ಜನಾರ್ಧನ, ಜಗದೀಶ ಭೂಮಾ ಸೇರಿದಂತೆ, ಲಾಲಪ್ಪ ತಲಾರಿ ಸಮಾಜದ ಮುಖಂಡರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.