ಹತ್ತಿಕುಣಿ (ಯರಗೋಳ): ‘ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘಗಳು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ₹ 3 ಲಕ್ಷ ವರೆಗೆ ಸಾಲ ನೀಡುವ ಮೂಲಕ ಕೃಷಿ ಕ್ಷೇತ್ರ ಬೆಳವಣಿಗೆ ಹಾಗೂ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಪ್ರಮುಖ ಪಾತ್ರ ವಹಿಸಿವೆ’ ಎಂದು ಹತ್ತಿಕುಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಶರಣಪ್ಪಗೌಡ ಮಾಲಿ ಪಾಟೀಲ್ ಹೇಳಿದರು.
ಹತ್ತಿಕುಣಿ ಗ್ರಾಮದ ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘ ಪ್ರಸಕ್ತ ಸಾಲಿನಲ್ಲಿ ರೈತರಿಗೆ ₹2.24 ಕೋಟಿ ಬೆಳೆಸಾಲ ಮತ್ತು ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ₹2.14 ಕೋಟಿ, ಸ್ವಸಹಾಯ ಸಂಘಗಳಿಗೆ ₹ 32 ಲಕ್ಷ ಸಾಲ ವಿತರಿಸಿದೆ. ಅದರಂತೆ ರೈತರು ಸಂಘದಲ್ಲಿ ₹ 9 ಲಕ್ಷ ಠೇವಣಿ ಹಣ ಇರಿಸಿದ್ದಾರೆ ಎಂದರು.
ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಪ್ರಮಾಣಿಕ ಪ್ರಯತ್ನದಿಂದ ಶೇ.100% ಸಾಲ ವಸೂಲಾತಿ ಮಾಡುವ ಮೂಲಕ ಸಂಘಕ್ಕೆ ₹9 ಲಕ್ಷ ಲಾಭ ಬಂದಿದೆ ಎಂದು ತಿಳಿಸಿದರು.
‘ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಮಾಡಬೇಕು. ಇದು ಕುಟುಂಬಗಳಿಗೆ ಆರ್ಥಿಕ ಬಲ ತುಂಬುತ್ತದೆ’ ಎಂದರು.
ಸಂಘದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್ ಉದ್ಘಾಟಿಸಿದರು, ಸಂಘದ ನಿರ್ದೇಶಕ ವೀರಭದ್ರಪ್ಪ ಯಡ್ಡಳ್ಳಿ ಮಾತನಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಕುಮಾರ ಪುಟಗಿ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಖಂಡಪ್ಪನೋರ್, ನಿರ್ದೇಶಕರಾದ ಬೋಜಣ್ಣಗೌಡ ಯಡ್ಡಳ್ಳಿ, ಬಸವರಾಜ ಕೋಡ್ಲಾ, ಸಾಬರೆಡ್ಡಿ ತಮ್ಮಣೋರ್, ನರಸಪ್ಪ ಇದ್ಲಿ, ಸಾಬಣ್ಣ ಬೊಳೆರ್, ನರಸಪ್ಪ ಭೀಮನಳ್ಳಿ, ಯಲ್ಲಮ್ಮ ತಮ್ಮಣೋರ್, ಭೀಮವ್ವ ಸಮಣಾಪೂರ್, ಭೀಮರಡ್ಡಿ ರಾಂಪೂರಳ್ಳಿ, ಅಮೀನರೆಡ್ಡಿ ಬಿಳ್ಹಾರ್, ಶರಣಪ್ಪ ಶಂಕ್ರಪ್ಪನೋರ್, ದೇವಿಂದ್ರಪ್ಪಗೌಡ ಮಾಲಿ ಪಾಟೀಲ್, ಚಂದ್ರಾರೆಡ್ಡಿ ಬಂದಳ್ಳಿ ಉಪಸ್ಥಿತರಿದ್ದರು.
ಸಾಬಣ್ಣ ಯಾದಗಿರಿ ಸ್ವಾಗತಿಸಿದರು, ಅಲ್ಲಾಬಕಾಸ್ ವಂದಿಸಿದರು,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.