ADVERTISEMENT

ಶಹಾಪುರ: ನಾಗರ ಪಂಚಮಿ ಹಬ್ಬದ ಸಂಭ್ರಮ ಕಸಿದ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 16:04 IST
Last Updated 25 ಜುಲೈ 2020, 16:04 IST
ಶಹಾಪುರದಲ್ಲಿ ಮಹಿಳೆಯರು ನಾಗರ ಹುತ್ತಕ್ಕೆ ಪೂಜೆ ಸಲ್ಲಿಸಿದರು
ಶಹಾಪುರದಲ್ಲಿ ಮಹಿಳೆಯರು ನಾಗರ ಹುತ್ತಕ್ಕೆ ಪೂಜೆ ಸಲ್ಲಿಸಿದರು   

ಶಹಾಪುರ: ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಿದ್ದ ನಾಗರಪಂಚಮಿ ಹಬ್ಬವು ಈ ಬಾರಿ ಕೊರೊನಾ ವೈರಸ್ ಹಾವಳಿಯಿಂದ ಕಳೆಗುಂದಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಉತ್ಸಾಹ ಕಾಣಿಸಲಿಲ್ಲ. ಸಾಂಕೇತಿಕವಾಗಿ ಹಬ್ಬವನ್ನು ನಮ್ಮ ಮನೆಯಲ್ಲಿ ಆಚರಿಸಿದೆವು ಎನ್ನುತ್ತಾರೆ ನಗರದ ಮಹಿಳೆಯರು.

ಮಹಿಳೆಯರ ಹಬ್ಬವಾಗಿರುವ ನಾಗರಪಂಚಮಿಯಂದು ಹೊಸ ಬಟ್ಟೆ ಧರಿಸಿ ವಿವಿಧ ಬಗೆಯ ಸಿಹಿ ಪದಾರ್ಥಗಳನ್ನು ಮನೆಯಲ್ಲಿ ಸಿದ್ಧಪಡಿಸಿಕೊಂಡು ನಾಗದೇವತೆಗೆ ಪೂಜೆ ಸಲ್ಲಿಸಿ ನಂತರ ನಮ್ಮ ಆತ್ಮೀಯ ಬಂಧು ಹಾಗೂ ಅಕ್ಕಪಕ್ಕದ ಮನೆಯವರಿಗೆ ಸಿಹಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಆದರೆ ಪ್ರಸಕ್ತ ಬಾರಿ ಎಲ್ಲಾ ಉಲ್ಟಾಪಲ್ಟಾ ಆಗಿದೆ. ಸಿದ್ಧಪಡಿಸಿದ ಸಿಹಿಯನ್ನು ಅವರವರೇ ಸೇವಿಸುವಂತೆ ಆಗಿದೆ. ಮತ್ತೊಬ್ಬರ ಮನೆಯೊಂದಿಗೆ ಸಿಹಿ ಹಂಚಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಕೊರೊನಾ ಭೀತಿಯಿಂದ ಹಿಂಜರಿಕೆ ಎನ್ನುತ್ತಾರೆ ನಗರದ ನಿವಾಸಿ ಶೋಭಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT