ADVERTISEMENT

ಹತ್ತಿ ಕಳವು; ₹4.7 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 3:23 IST
Last Updated 15 ಆಗಸ್ಟ್ 2021, 3:23 IST
ಸುರಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ತಿ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು. ಇನ್‍ಸ್ಪೆಕ್ಟರ್ ಸುನೀಲ ಮೂಲಿಮನಿ, ಪಿಎಸ್‍ಐ ಕೃಷ್ಣಾ ಸುಬೇದಾರ ಮತ್ತು ಸಿಬ್ಬಂದಿ ಇದ್ದಾರೆ
ಸುರಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹತ್ತಿ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿರುವುದು. ಇನ್‍ಸ್ಪೆಕ್ಟರ್ ಸುನೀಲ ಮೂಲಿಮನಿ, ಪಿಎಸ್‍ಐ ಕೃಷ್ಣಾ ಸುಬೇದಾರ ಮತ್ತು ಸಿಬ್ಬಂದಿ ಇದ್ದಾರೆ   

ಸುರಪುರ: ‘ಹತ್ತಿ ಕದ್ದು ಛತ್ತೀಸ್‍ಘಡಕ್ಕೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹4.7 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಇನ್‍ಸ್ಪೆಕ್ಟರ್ ಸುನೀಲ ಮೂಲಿಮನಿ ತಿಳಿಸಿದರು.

‘2017ರಲ್ಲಿ ನಗರದ ಲಕ್ಷ್ಮಿನಾರಾಯಣ ಕಾಟನ್ ಮಿಲ್‍ನಿಂದ ಹತ್ತಿ ತುಂಬಿದ ಲಾರಿಯೊಂದಿಗೆ ಆರೋಪಿಗಳಾದ ಛತ್ತೀಸ್‌ಘಡದ ಉತ್ತಮ್ ಸಾಹು ಮತ್ತು ರೂಪಾಸಿಂಗ್ ಪಾಲ್ ಪರಾರಿ ಆಗಿದ್ದರು. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‘ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಮಾರ್ಗದರ್ಶನದಲ್ಲಿ ಪಿಎಸ್‍ಐ ಕೃಷ್ಣಾ ಸುಬೇದಾರ, ಹೆಡ್ ಕಾನ್‍ಸ್ಟೆಬಲ್ ಮನೋಹರ ರಾಠೋಡ, ಚಂದ್ರಶೇಖರ ಪಾಟೀಲ, ನಿಂಗಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು’ ಎಂದು ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.