ADVERTISEMENT

ಯಾದಗಿರಿ ಜಿಲ್ಲೆಗೆ 80 ಬಸ್‌ಗಳಲ್ಲಿ ಬಂದ ವಲಸೆ ಕಾರ್ಮಿಕರಿಗೆ ಕೋವಿಡ್‌ ಟೆಸ್ಟ್‌

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 6:51 IST
Last Updated 28 ಏಪ್ರಿಲ್ 2021, 6:51 IST
ವಲಸೆ ಕಾರ್ಮಿಕರಿಗೆ ಕೊರೊನಾ ಪರೀಕ್ಷೆಗೆ ನಡೆಸಲಾಯಿತು.
ವಲಸೆ ಕಾರ್ಮಿಕರಿಗೆ ಕೊರೊನಾ ಪರೀಕ್ಷೆಗೆ ನಡೆಸಲಾಯಿತು.   

ಯರಗೋಳ (ಯಾದಗಿರಿ ಜಿಲ್ಲೆ): ಲಾಕ್‌ಡೌನ್‌ ಕಾರಣಕ್ಕಾಗಿ ಬೆಂಗಳೂರು ಮತ್ತಿತರೆಡೆಯಿಂದ ಜಿಲ್ಲೆಗೆ 80 ಬಸ್‌ಗಳಲ್ಲಿ ವಲಸೆ ಕಾರ್ಮಿಕರು ಬಂದಿದ್ದಾರೆ.

ಇವರನ್ನು ಅವರ ಊರಿಗೆ ಕಳಿಸುವ ಮುನ್ನ ಜಿಲ್ಲಾ ಆಡಳಿತ ಅವರಿಂದ ಕೋವಿಡ್‌ ಪರೀಕ್ಷೆಯ ಮಾದರಿ ಸಂಗ್ರಹಿಸುತ್ತಿದೆ.

ಯಾದಗಿರಿ ಜಿಲ್ಲೆಯ ಪ್ರವೇಶದಲ್ಲೇ ಬಸ್‌ಗಳನ್ನು ತಡೆದಿರುವ ಜಿಲ್ಲಾ ಆಡಳಿತ, ಎರಡು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕೋವಿಡ್‌ ಪರೀಕ್ಷೆ ನಡೆಸುತ್ತಿದೆ.

ADVERTISEMENT

ಇವರನ್ನು ಹೊತ್ತುತಂದ ಬಸ್‌ಗಳು ಸಾಲಾಗಿ ನಿಂತಿವೆ.

ವಸಲೆ ಕಾರ್ಮಿಕರು ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳುವಂತೆ ಜಿಲ್ಲಾ ಆಡಳಿತ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.