ADVERTISEMENT

ಸುರಪುರ: ಶಾಸಕರ ಮನೆ ಮುಂದೆ ಸಿಪಿಐ(ಎಂ), ಎಸ್‍ಯುಸಿಐ(ಸಿ) ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 15:34 IST
Last Updated 15 ಜೂನ್ 2021, 15:34 IST
ಸಮರ್ಪಕ ಪರಿಹಾರ ನೀಡುವಂತೆ ಒತ್ತಾಯಿಸಿ ಸಿಪಿಐ(ಎಂ), ಎಸ್‍ಯುಸಿಐ(ಸಿ) ಸಂಸ್ಥೆಗಳ ಸದಸ್ಯರು ಸುರಪುರ ಶಾಸಕ ರಾಜೂಗೌಡ ಅವರ ಮನೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು
ಸಮರ್ಪಕ ಪರಿಹಾರ ನೀಡುವಂತೆ ಒತ್ತಾಯಿಸಿ ಸಿಪಿಐ(ಎಂ), ಎಸ್‍ಯುಸಿಐ(ಸಿ) ಸಂಸ್ಥೆಗಳ ಸದಸ್ಯರು ಸುರಪುರ ಶಾಸಕ ರಾಜೂಗೌಡ ಅವರ ಮನೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು   

ಸುರಪುರ: ಕೋವಿಡ್ ಮತ್ತು ಲಾಕ್‍ಡೌನ್‍ನಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು, ಸಮರ್ಪಕ ಪರಿಹಾರ ನೀಡುವಂತೆ ಒತ್ತಾಯಿಸಿ ಸಿಪಿಐ(ಎಂ), ಎಸ್‍ಯುಸಿಐ(ಸಿ) ಸಂಸ್ಥೆಗಳ ಸದಸ್ಯರು ಶಾಸಕ ರಾಜೂಗೌಡ ಅವರ ಮನೆ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ದಾವಲಸಾಬ್ ನಧಾಪ್ ಮಾತನಾಡಿ, 'ಇಂಧನ, ವಿದ್ಯುತ್, ರಸಾಯನಿಕ ಗೊಬ್ಬರಗಳ ಬೆಲೆ ಏರಿಸಿ ಬಡವರ ಮತ್ತು ರೈತರ ಮೇಲೆ ಹೊರೆ ಹೆಚ್ಚಿಸಲಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ಲೂಟಿಗೆ ತೆರೆಯಲಾಗಿದೆ. ಆಳುವ ಸರ್ಕಾರದ ಕೆಲ ಶಾಸಕರು ಆಸ್ಪತ್ರೆಯಲ್ಲಿ ಬೆಡ್, ಔಷಧ, ಲಸಿಕೆ, ಆಕ್ಸಿಜನ್‍ಗಳನ್ನು ಕಾಳಸಂತೆಯಲ್ಲಿ ತೊಡಗಿದ್ದಾರೆ' ಎಂದು ಆರೋಪಿಸಿದರು.

ಜಿಲ್ಲಾ ಮುಖಂಡ ರಾಮಣ್ಣ ಆಲ್ದಾಳ, ಧರ್ಮಣ್ಣ ದೊರಿ ಸುರಪುರ, ರಫೀಕ್, ಮಲ್ಲೇಶಿ ನಾಗರಾಳ, ದೇವಿಕೆಮ್ಮ ನಾಗರಾಳ, ಸಿದ್ಧಮ್ಮ ಬೋನಾಳ, ಬಸವರಾಜ ನಾಗರಾಳ, ಶರೀಫಮ್ಮ, ಅಮೀನಾಬೇಗಂ, ಈರನಗೌಡ ನಾಗರಾಳ, ಶರಣಬಸವ ಜಂಬಲದಿನ್ನಿ, ಖಾಜಾಸಾಬ್ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.