ಹುಣಸಗಿ: ಸಮೀಪದ ದೇವತಕಲ್ಲ ಗ್ರಾಮದ ಹೊರವಲಯದಲ್ಲಿ ಮೊಸಳೆ ಮರಿಯೊಂದು ಬುಧವಾರ ಕಾಣಿಸಿಕೊಂಡಿತ್ತು. ಅದನ್ನು ಹಿಡಿದು ರಾತ್ರಿ ಸುರಕ್ಷಿತವಾಗಿ ಬಸವಸಾಗರ ಜಲಾಶಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದೇವತಕಲ್ಲ ಗ್ರಾದಮಲ್ಲಿ ಮೀನು ಮರಿ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ ಆ ಹೊಂಡದ ಪಕ್ಕದಲ್ಲಿರುವ ಹೊಂಡದಲ್ಲಿ ಮೊಸಳೆ ಕಂಡಿದೆ. ಅದನ್ನು ರೈತರು ನೋಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿ ಎಚ್.ಬಿ ಬಿರಾದಾರ ಸ್ಥಳಕ್ಕೆ ಆಗಮಿಸಿ ನುರಿತ ಮೀನುಗಾರ ದೌಲತ್ ಅವರ ಸಹಾಯದಿಂದ ಮೊಸಳೆಯನ್ನು ರಕ್ಷಿಸಲಾಗಿದೆ. ಒಂದು ವರ್ಷದ ಮೊಸಳೆ ಎಂದು ಹೇಳಲಾಗಿದೆ.
ಅರಣ್ಯ ರಕ್ಷಕ ಸಿದ್ದಲಿಂಗಯ್ಯ, ಸೈಯದ್ ಪಟೇಲ್, ಶರಣಗೌಡ, ಹನುಮಂತ, ಶರಣು ಪ್ರಜ್ವಲ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.