ಯಾದಗಿರಿ: ಇಲ್ಲಿನ ದುರ್ಗಾನಗರದಲ್ಲಿ ಶನಿವಾರ ಸಿಲಿಂಡರ್ ಸ್ಫೋಟದಿಂದ ಶೆಡ್‌ವೊಂದು ಬೆಂಕಿಗೆ ಆಹುತಿಯಾಗಿದ್ದು, ನಗದು, ಚಿನ್ನಾಭರಣ ಸುಟ್ಟು ಕರಕಲಾಗಿವೆ.
ಮಲ್ಲಯ್ಯ–ಅಕ್ಕಮ್ಮ ಅವರಿಗೆ ಸೇರಿದ ಶೆಡ್ ಬೆಂಕಿಗೆ ಆಹುತಿಯಾಗಿದೆ. ಕುಟುಂಬವು ಕಂಗಾಲಾಗಿದೆ.
ಹೊಸ ಮನೆ ನಿರ್ಮಾಣಕ್ಕಾಗಿ ಪಕ್ಕದಲ್ಲಿ ಮಲ್ಲಯ್ಯ ಅವರು ಶೆಡ್ ನಿರ್ಮಿಸಿಕೊಂಡಿದ್ದರು. ಹೊಸ ಮನೆಯ ಗೃಹ ಪ್ರವೇಶಕ್ಕೆ ತಯಾರಿ ನಡೆಸಿದ್ದರು. ಶನಿವಾರ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ₹7 ಲಕ್ಷ ನಗದು, 100 ಗ್ರಾಂ ಚಿನ್ನ,150 ಗ್ರಾಂ ಬೆಳ್ಳಿಯ ಆಭರಣಗಳು, ಆಹಾರ ಧಾನ್ಯ ಸೇರಿ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ.
ಸ್ಥಳಕ್ಕೆ ಕಂದಾಯ ಅಧಿಕಾರಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ‘ಮನೆ ಹಾನಿಯಿಂದ ದಂಪತಿ ಕಣ್ಣೀರು ಹಾಕುವಂತಾಗಿದೆ. ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು’ ಎಂದು ನಿವಾಸಿಗಳು ಒತ್ತಾಯ ಮಾಡಿದ್ದಾರೆ.
ಈ ವೇಳೆ ಕಂದಾಯ ಅಧಿಕಾರಿ ನಿಂಗಣ್ಣ ಜಾಲಗಾರ, ಬಸವರಾಜ ಸೇರಿ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.