ADVERTISEMENT

‘ದೀಪಾವಳಿ’ ವಿಶೇಷಾಂಕ ಬಿಡುಗಡೆ ಮಾಡಿದ ಡಿಸಿ

ಓದುಗರನ್ನು ಸೆಳೆಯುತ್ತವೆ ಸ್ಪರ್ಧಾ ಕಥೆಗಳು: ಜಿಲ್ಲಾಧಿಕಾರಿ ಸ್ನೇಹಲ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 6:46 IST
Last Updated 21 ಅಕ್ಟೋಬರ್ 2022, 6:46 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ‘ಪ್ರಜಾವಾಣಿ’ ‘ದೀಪಾವಳಿ’ ವಿಶೇಷಾಂಕ ಬಿಡುಗಡೆ ಮಾಡಿ ಲೇಖನಗಳನ್ನು ಪರಿಶೀಲಿಸಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ‘ಪ್ರಜಾವಾಣಿ’ ‘ದೀಪಾವಳಿ’ ವಿಶೇಷಾಂಕ ಬಿಡುಗಡೆ ಮಾಡಿ ಲೇಖನಗಳನ್ನು ಪರಿಶೀಲಿಸಿದರು   

ಯಾದಗಿರಿ: ‘ಪ್ರಜಾವಾಣಿ’ ಕನ್ನಡ ದಿನ ಪತ್ರಿಕೆ ಹೊರ ತಂದಿರುವ ‘ದೀಪಾವಳಿ’ ವಿಶೇಷಾಂಕವನ್ನು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌., ತಮ್ಮ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ‘ದೀಪಾವಳಿ’ ವಿಶೇಷಾಂಕ ವಿಶೇಷವನ್ನು ಹೊಂದಿದೆ. ಕಥೆ, ಕವನ, ಪ್ರವಾಸ ಕಥನ, ಅಡುಗೆ, ಮಕ್ಕಳ ಕಥೆಗಳು, ಸ್ಪರ್ಧಾ ಕಥೆಗಳು ಓದುಗರನ್ನು ಸೆಳೆಯುತ್ತವೆ ಎಂದು ಅಭಿಪ್ರಾಯಿಸಿದರು.

ಪುಟಗಳು ಉತ್ತಮ ವಿನ್ಯಾಸ ಹೊಂದಿದ್ದು, ಓದುಗರನ್ನು ಆಕರ್ಷಿಸುತ್ತವೆ. ಹಲವಾರು ಲೇಖಕರು ತಮ್ಮ ಅನುಭವಗಳನ್ನು ದಾಖಲಿಸಿಟ್ಟಿದ್ದಾರೆ.ಕಥಾ ಸ್ಪರ್ಧೆ, ಮೆಚ್ಚುಗೆ ಪಡೆದ ಕವನಗಳು ಇವೆ ಎಂದರು.

ADVERTISEMENT

ವಿಶೇಷಾಂಕ ಜೊತೆಗೆ ಸಮೃದ್ಧ ಕರ್ನಾಟಕ ಉಚಿತ ಕೊಡುಗೆ ಲಭ್ಯವಿದೆ.

ಈ ವೇಳೆ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ, ಪ್ರಸರಣ ವಿಭಾಗದ ಪ್ರತಿನಿಧಿ ಮಹಾಂತೇಶ ಬಸಗೊಂಡೆ, ಛಾಯಾಚಿತ್ರ ಗ್ರಾಹಕ ರಾಜಕುಮಾರ ನಳ್ಳಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.