ADVERTISEMENT

ಅಮೀನರಡ್ಡಿ ಮುಸ್ಲಿಂ ಬಗ್ಗೆ ಮಾತನಾಡಿದ ಅವಹೇಳನಕಾರಿ ವಿಡಿಯೊ ವೈರಲ್

ಬಿಜೆಪಿ ಅಭ್ಯರ್ಥಿ ಅಮೀನರಡ್ಡಿ ಪಾಟೀಲ ಹೇಳಿಕೆಗೆ ವ್ಯಾಪಕ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಮೇ 2023, 15:51 IST
Last Updated 15 ಮೇ 2023, 15:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಾಪುರ: ಇಲ್ಲಿನ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೀನರಡ್ಡಿ ಪಾಟೀಲ ಅವರು ಮೇ 14ರಂದು ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಸಮದಾಯಯದ ಬಗ್ಗೆ ಅವಹೇಳನಾಕಾರಿ ಹೇಳಿಕೆಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಪರ ಹಾಗೂ ವಿರೋಧದ ಚರ್ಚೆ ನಡೆದಿದೆ.

ವಿಡಿಯೋದಲ್ಲಿ ಏನಿದೆ: ಬಿಜೆಪಿ ಅಭ್ಯರ್ಥಿ ಅಮೀನರಡ್ಡಿ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ‘ನನಗೆ 52,326 ಮತಗಳನ್ನು ನೀಡಿರುವುದಕ್ಕೆ ಮತದಾರರಿಗೆ ಅಭಿನಂದನೆ ಸಲ್ಲಿಸುವೆ. ನನ್ನ ಸೋಲು ಹಿಂದೂಗಳ ಸೋಲು. ಇವತ್ತಿನ ಚುನಾವಣೆಯಲ್ಲಿ ಮುಸ್ಲಿಂ ಬಾಂಧವರು ಏಕಮುಖವಾಗಿ ಮತ ನೀಡಿ ಕಾಂಗ್ರೆಸ್ ಗೆಲ್ಲಿಸುವ ಕೆಲಸ ಮಾಡಿದ್ದಾರೆ. ನಾನು ಸಹ ನಿರಂತರವಾಗಿ ಐದು ವರ್ಷ ಯಾವುದೇ ಜಾತಿ, ವರ್ಗವನ್ನು ನೋಡದೆ ಕೋರೊನಾ ಸಂದರ್ಭದಲ್ಲಿ ಸಾಕಷ್ಟು ಆಹಾರ ಕಿಟ್, ಆಹಾರ ಪೊಟ್ಟಣ ವಿತರಣೆ ಮಾಡಿದ್ದೆ. ಆದರೆ ಅವರು ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ' ಎಂಬ ಮಾತುಗಳು ತೀವ್ರ ಟೀಕೆಗೆ ಗುರಿಯಾಗಿವೆ.

ಈ ಕುರಿತು ಈಗಾಗಲೇ ಕೆಲ ಮುಸ್ಲಿಂ ಸಮದಾಯದವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಈ–ಮೇಲ್‌ ಮೂಲಕ ದೂರು ದಾಖಲಿಸಿರುವುದು ತಿಳಿದು ಬಂದಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.