
ಹುಣಸಗಿ: ‘ನಮ್ಮ ಹುಣಸಗಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿಯೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜನಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವದು ಸಂತಸದ ಸಂಗತಿಯಾಗಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.
ಹುಣಸಗಿ ಪಟ್ಟಣದ ವರಹಳ್ಳೇರಾಯ ಸೇವಾ ಸಮಿತಿ ಟ್ರಸ್ಟ್‌ಗೆ ಧರ್ಮಸ್ಥಳ ಸಂಸ್ಥೆಯಿಂದ ಮಂಜೂರಾಗಿರುವ ₹ 1 ಲಕ್ಷ ಮೊತ್ತದ ಮಂಜೂರಾತಿ ಪತ್ರ ನೀಡಿ ಮಾತನಾಡಿದರು.
ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ. ಎಲ್ಲ ಕೆಲಸ ಕಾರ್ಯಗಳಿಗೂ ಕೈಗೂಡಿಸುವದಾಗಿ ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿದ್ರಾಮಪ್ಪ ಮುದಗಲ್ಲ ಮಾತನಾಡಿ, ‘ಒಳ್ಳೇಯ ಕೆಲಸ ಕಾರ್ಯನಿರ್ವಹಿಸುವ ಸಂಘ ಸಂಸ್ಥೆಗಳನ್ನು ಸಮಾಜ ಸದಾ ಗುರುತಿಸುತ್ತದೆ’ ಎಂದರು.
ಧರ್ಮಸ್ಥಳ ಸಂಸ್ಥೆಯ ತಾಲ್ಲೂಕು ಅಧಿಕಾರಿ ನಾಗೇಶ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿಯೇ ತನ್ನ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದೆ. ತಾಲ್ಲೂಕಿನಲ್ಲಿ ಅಶಕ್ತರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ಮೂಲಕ ಆಸರೆಯಾಗಿದೆ. ಶೀಘ್ರದಲ್ಲಿಯೇ ಮುದನೂರು ಗ್ರಾಮದಲ್ಲಿ ಅಂದಾಜು ₹ 10 ಲಕ್ಷ ವೆಚ್ಚದಲ್ಲಿ ಕೆರೆ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜಶೇಖರ ದೇಸಾಯಿ, ನೀಖಿತಾ ಗೂಳಪ್ಪ ಅಂಗಡಿ, ರಮೇಶ ವಾಲಿ, ಮುಖಂಡರಾದ ರವಿಂದ್ರ ಜಮದರಖಾನ, ಟ್ರಸ್ಟ್‌ನ ಅಧ್ಯಕ್ಷ ಚಂದ್ರಕಾಂತ ದೇಶಪಾಂಡೆ, ಲಕ್ಷ್ಮೀಕಾಂತ ಜಮದರಖಾನ, ಪ್ರಾಣೇಶ ಕುಲಕರ್ಣಿ, ವೆಂಕಟೇಶ ಆಚಾರ್ಯ ಅರಳಿಗಿಡ, ಸತ್ಯನಾರಾಯಣ ಕುಲಕರ್ಣಿ, ಕೃಷ್ಣಾ ದೇಶಪಾಂಡೆ, ವೆಂಕಟಗಿರಿ ದೇಶಪಾಂಡೆ, ಶಾಮಸುಂದರ ದೇಶಪಾಂಡೆ, ಸಂತೋಷ ಅಹಂಕಾರಿ, ವಿನಯ ಜೋಶಿ ಸೇರಿದಂತೆ ಇತರರು ಇದ್ದರು.
ಭೀಮಶೇನರಾವ್ ಕುಲಕರ್ಣಿ ಸ್ವಾಗತಿಸಿದರು. ಸವಿತಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.