ಯಾದಗಿರಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗ ಸೇರಿ ಒಟ್ಟು 13 ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ಹೊಸಕೇರಾ ತಾಂಡಾ ಶಾಲೆಯ ಶಾರದಾ, ಯಾದಗಿರಿ ಲಕ್ಷ್ಮಿ ನಗರದ ಶಾಲೆಯ ಸುವರ್ಣಾ ಮತ್ತು ಸುರಪುರ ತಾಲ್ಲೂಕಿನ ಉಪ್ಪಲದಿನ್ನಿ ಶಾಲೆಯ ಬಸಪ್ಪ ದೊರೆ ಆಯ್ಕೆಯಾದವರು.
ಹಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಹಾಪುರ ತಾಲ್ಲೂಕಿನ ಮಲಹಳ್ಳಿ ಶಾಲೆಯ ಗೋವರ್ಧನ, ಸುರಪುರ ತಾಲ್ಲೂಕಿನ ಬಲಶೆಟ್ಟಿಹಾಳ ಶಾಲೆಯ ಸುವರ್ಣಾ ಹಿರೇಮಠ, ಕೆಂಭಾವಿ ಶಾಲೆಯ ನೀಲಮ್ಮ ಬಿ. ಮಲ್ಲೆ ಹಾಗೂ ಗುರುಮಠಕಲ್ ಶಾಲೆಯ ಸುನಿತಾ ಆಯ್ಕೆಯ ಪಟ್ಟಿಯಲ್ಲಿ ಇರುವವರು.
ಪ್ರೌಢ ಶಾಲೆ ವಿಭಾಗದಲ್ಲಿ ಯಾದಗಿರಿ ತಾಲ್ಲೂಕಿನ ಅರಕೇರಾ (ಕೆ) ಶಾಲೆಯ ಸಂತೋಷಕುಮಾರ್, ಲಿಂಗೇರಿ ಸ್ಟೇಷನ್ ಶಾಲೆಯ ಭೀಮರಾಯ, ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಶಾಲೆಯ ವಿಶ್ವರಾಧ್ಯ, ನಾಗನಟಗಿ ಶಾಲೆಯ ಮಲ್ಲಿಕಾರ್ಜುನ ಹಾಗೂ ಸುರಪುರ ತಾಲ್ಲೂಕಿನ ದೇವರಗೋನಾಳ ಶಾಲೆಯ ಭೀಮರಾಯ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.