ADVERTISEMENT

ಕೊರೊನಾ ಗೆದ್ದವರು | ಕೋವಿಡ್‌ ಬಗ್ಗೆ ಮುಂಜಾಗ್ರತೆ ಇರಲಿ, ಭಯಬೇಡ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 17:15 IST
Last Updated 19 ಜುಲೈ 2020, 17:15 IST
ನಾಗಪ್ಪ ಮಾಲಿಪಾಟೀಲ, ಕೋವಿಡ್‌ ಗೆದ್ದವರು
ನಾಗಪ್ಪ ಮಾಲಿಪಾಟೀಲ, ಕೋವಿಡ್‌ ಗೆದ್ದವರು   

ಯಾದಗಿರಿ: ಜುಲೈ 6ರಂದು ಕೋವಿಡ್‌ ಇರುವ ಕುರಿತು ಆರೋಗ್ಯ ಇಲಾಖೆಯಿಂದ ಮಾಹಿತಿ ಬಂತು. ಇದರಿಂದ ನನಗೆ ಭಯವೇನೂಆಗಲಿಲ್ಲ. ಊಟ ಮುಗಿಸಿಕೊಂಡು ಮನೆಯಿಂದ ಆಸ್ಪತ್ರೆಗೆ ಹೊರಟೆ. ಆಸ್ಪತ್ರೆಯಿಂದ ಮನೆಗೆ ಬರುವಾಗಲೂ ಊಟ ಸೇವಿಸಿ ಬಂದೆ. ಅಂದರೆ ಅದು ಸಹಜ ಪ್ರಕ್ರಿಯೆ ಅಷ್ಟೆ.

ಆಯುಷ್‌ ಇಲಾಖೆ ಸೂಚಿಸಿದ ರೋಗ ನಿರೋಧಕ ಶಕ್ತಿ ಹೆಚ್ಚುವ ಮಾತ್ರೆ, ಕಷಾಯ ಸೇವಿಸುತ್ತಾ ಬಂದಿದ್ದೇನೆ. ಅಮೃತ ಬಳ್ಳಿ ಕಷಾಯ, ಅಮೃತ ಚೂರ್ಣ ಸೇವಿಸುತ್ತೇನೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಕೆಮ್ಮು, ನೆಗಡಿ, ತಲೆನೋವು, ಜ್ವರ ಯಾವುದು ಬಂದಿಲ್ಲ. ಪರೀಕ್ಷೆ ಮಾಡಿಸಿದ ಮೇಲೆ ಕೋವಿಡ್‌ ಇರುವುದು ಗೊತ್ತಾಗಿದೆ. ಹೀಗಾಗಿ ಸಹಜವಾಗಿ ಇರಬೇಕು. ಯಾವುದೇ ಆತಂಕ ಪಡಬಾರದು.

ಸೋಂಕು ತಗುಲಿದೆ ಎನ್ನುವ ಭಾವನೆಯೇ ಇಲ್ಲ. ಬಿಸಿ ನೀರು, ಅರುಷಿಣ ನೀರು ಸೇವಿಸುತ್ತಿದ್ದೆ. ಕೋವಿಡ್ ವಿರುದ್ಧ ಗೆದ್ದು ಬರುವಂತ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಜುಲೈ 16ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದೇನೆ.

ADVERTISEMENT


ನಾಗಪ್ಪ ಮಾಲಿಪಾಟೀಲ, ಕೋವಿಡ್‌ ಗೆದ್ದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.