
ಯಾದಗಿರಿ: ಶಹಾಪುರ ತಾಲ್ಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ದಲಿತರಿಗಾಗಿ ಮೀಸಲಿರುವ ರುದ್ರಭೂಮಿಯ ಒತ್ತುವರಿ ತೆರವು ಮಾಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಮುಖಂಡರು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು.
ಗ್ರಾಮದ ಮರಮಕಲ್ ಸಿಮಾಂತರದ ಸ.ನಂ 9ರಲ್ಲಿ ಸುಮಾರು 15 ವರ್ಷಗಳ ಹಿಂದೆ 3 ಎಕರೆ ಜಾಗವನ್ನು ಖರೀದಿ ಮಾಡಲಾಗಿತ್ತು. ಈ ಜಾಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕರ ಹೆಸರಿನಲ್ಲಿದೆ. ರುದ್ರಭೂಮಿಗಾಗಿ ಮೀಸಲಿರುವ ಜಾಗ ಒತ್ತುವರಿಯಾಗಿದೆ ಎಂದರು.
ಒತ್ತುವರಿಯನ್ನು ತೆರವು ಮಾಡಿ, ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಪಹಣಿಯಲ್ಲಿ ದಲಿತರ ರುದ್ರಭೂಮಿ ಎಂದು ನಮೂದಿಸಬೇಕು. ಒತ್ತುವರಿ ಮಾಡಿಕೊಂಡವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಈ ವೇಳೆ ಸಂಘಟನೆಯ ಮುಖಂಡರಾದ ಶಿವಪುತ್ರ ಜವಳಿ, ಮರೆಪ್ಪ ಕ್ರಾಂತಿ, ಶಿವಲಿಂಗ ಹಾಸನಾಪುರ, ಶರಬಣ್ಣ ದೋರನಹಳ್ಳಿ, ಭೀಮಶಂಕರ ಗುಂಡಹಳ್ಳಿ, ದೊಡ್ಡಪ್ಪ ಕಾಡಿಂಗೇರ, ಸಂತೋಷ್ ಗುಂಡಹಳ್ಳಿ, ನಾಗರಾಜ್ ಕೋಡಮ್ಮನಹಳ್ಳಿ, ಮಲ್ಲು ಖಾನಾಪುರ, ನಿಂಗಪ್ಪ ಖಾನಾಪುರ, ಮಹಾಂತೇಶ್, ಮಲ್ಲಿಕಾರ್ಜುನ್, ಹೊನ್ನಪ್ಪ, ಮಾಳಪ್ಪ, ಸಿದ್ದಪ್ಪ, ಮರಿಯಪ್ಪ, ಭೀಮವ್ವ ಸೇರಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.