ವಿದ್ಯುತ್ ಪ್ರವಹಿಸಿ ಸಾವು
ಕೆಂಭಾವಿ (ಯಾದಗಿರಿ): ಸದಬ ಗ್ರಾಮದಲ್ಲಿ ಜಮೀನಿನಲ್ಲಿ ಶುಕ್ರವಾರ ಕೆಲಸ ಮಾಡುತ್ತಿದ್ದ ಮೂವರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಈರಪ್ಪ (40), ಸುರೇಶ (23), ದೇವು ಅಗತೀರ್ಥ (30) ಮೃತರು.
ಟ್ರಾನ್ಸ್‌ಫಾರ್ಮರ್ ಹತ್ತಿರ ಇದ್ದ ಸರ್ವಿಸ್ ತಂತಿ ತುಳಿದಿದ್ದರಿಂದ ಮೊದಲು ಒಬ್ಬರಿಗೆ ವಿದ್ಯುತ್ ಶಾಕ್ ಹೊಡೆದಿದೆ. ರಕ್ಷಿಸಲು ಹೋದ ಮತ್ತೊಬ್ಬರಿಗೂ ವಿದ್ಯುತ್ ಪ್ರವಹಿಸಿದೆ. ಇಬ್ಬರನ್ನೂ ರಕ್ಷಿಸಲು ಹೋದ ಮೂರನೇ ವ್ಯಕ್ತಿಯೂ ವಿದ್ಯುತ್ ಆಘಾತದಿಂದ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಮೃತರಲ್ಲಿ ಇಬ್ಬರು ಸದಬ, ಒಬ್ಬರು ಅಗತೀರ್ಥ ಕ್ಯಾಂಪ್ ನಿವಾಸಿಗಳು. ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.