ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಎಲ್ಹೇರಿ ಗ್ರಾಮದಲ್ಲಿ ಮತ್ತು ಹೊಲಗಳ ಬದುಗಳಲ್ಲಿ ವಿವಿಧ ಜಾತಿಯ ಹಣ್ಣು, ಹೂವಿನ ಸಸಿಗಳನ್ನು ವಿಕಾಸ ಅಕಾಡೆಮಿಯ ಸಂಯೋಜಕ ನೀಲಕಂಠರಾಯ ಎಲ್ಹೇರಿ ತಮ್ಮ ಸ್ವಂತ ಖರ್ಚಿನಲ್ಲಿ ಹಾಗೂ ಸಂಘ–ಸಂಸ್ಥೆಗಳ ನೆರವಿನಿಂದ ನೆಟ್ಟಿದ್ದಾರೆ.
ಇದಕ್ಕಾಗಿ ಐದಾರು ವರ್ಷಗಳ ಹಿಂದೆ ಸುಮಾರು ₹25 ರಿಂದ 30 ಸಾವಿರ ಖರ್ಚು ಮಾಡಿದ್ದಾರೆ. ಹತ್ತಿಕುಣಿ, ಚಿಂತನಹಳ್ಳಿ ನರ್ಸರಿಯಿಂದ ಟ್ರ್ಯಾಕ್ಟರ್ ಮೂಲಕ ತಮ್ಮ ಗ್ರಾಮಕ್ಕೆ ಸಸಿಗಳನ್ನು ಸಾಗಿಸಿದ್ದಾರೆ.
ಮೂರು ಸಾವಿರ ಸಸಿಗಳಲ್ಲಿ 1,000 ಗಿಡ ಮರಗಳು ಹೆಮ್ಮರವಾಗಿ ಬೆಳೆದಿವೆ. ಪಟ್ಟಲದ ಹುಣಸೆಹಣ್ಣು, ನೇರಳೆ, ಬೇವು, ಚಿಕ್ಕು, ತೆಂಗು, ಪರಂಗಿ, ನಿಂಬೆ ಸೇರಿದಂತೆ ಇನ್ನಿತರ ಹಣ್ಣು, ಹೂಗಳನ್ನು ಬೆಳೆಸಿದ್ದಾರೆ. ಅಲ್ಲದೆ ಮನೆ ಮನೆಗೆ ತಿರುಗಾಡಿ ಊರಿನವರು ತಮ್ಮ ಮನೆ ಮುಂದೆ ಹೂ, ಹಣ್ಣು ಸಸಿಗಳನ್ನು ಬೆಳೆಸುವಂತೆ ಪ್ರೇರೇಪಿಸಿದ್ದಾರೆ.
ವಿಕಾಸ ಅಕಾಡೆಮಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಕೋಟಿ ಸಸಿ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ಹೀಗಾಗಿ ನಮ್ಮಊರು, ಹೊಲದಲ್ಲಿ ಗಿಡ ಮರ ಬೆಳೆಸಿದ್ದೇವೆ ಎನ್ನುತ್ತಾರೆನೀಲಕಂಠರಾಯ
ಎಲ್ಹೇರಿ.
ಸಸಿ ನೆಡಲು ವರದಿ ತಯಾರಿ: ‘ಗ್ರಾಮದಲ್ಲಿಯಾರೆಲ್ಲಾ ಸಸಿ ನೆಡಲಿದ್ದಾರೆ ಎಂದುಮೊದಲು ವರದಿ ತಯಾರಿಸಿದೆವು. ನಂತರ ಯಾರು ಸಸಿ ನೆಡಲು ಗುಂಡಿ ತೋಡಿದ್ದಾರೋ ಅವರಿಗೆ ಉಚಿತವಾಗಿ ಸಸಿ ವಿತರಿಸಲಾಯಿತು. ಅಂಥ ಗಿಡಗಳೇ ಈಗ ಸಾವಿರ ಗಿಡಗಳಾಗಿವೆ
ಎಂದರು.
ಜೈರಾಮ ರಮೇಶ್, ಸುಧಾ ಮೂರ್ತಿ ವೀಕ್ಷಣೆ: ಗ್ರಾಮದಲ್ಲಿ ಎಲ್ಲ ಕಡೆ ಶೌಚಾಲಯ ಕಟ್ಟಿಸಲು ಆರಂಭಿಸಲಾಗಿತ್ತು. ಇದನ್ನು ತಿಳಿದ ಕಾಂಗ್ರೆಸ್ ನಾಯಕಜೈರಾಮ ರಮೇಶ್ ಅವರು ಎಲ್ಹೇರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲದೆಇನ್ಫೋಸಿಸ್ ಪ್ರತಿಷ್ಠಾನ ಮುಖ್ಯಸ್ಥೆ ಸುಧಾಮೂರ್ತಿ ಅವರು ಕೂಡ ಗ್ರಾಮಕ್ಕೆ ಭೇಟಿ ನೀಡಿದ್ದರು. ಇನ್ಫೋಸಿಸ್ ಮೂಲಕ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಲಾಗುತ್ತಿತ್ತು. ಆ ವೇಳೆ ಗ್ರಾಮದಲೆಲ್ಲ ತಿರುಗಾಡಿದ್ದರು. ಗ್ರಾಮದಲ್ಲಿರುವ ಹಸಿರು ಕಂಡು ಶ್ಲಾಘಿಸಿದ್ದರು ಎಂದು ನೆನೆಪಿಸಿಕೊಳ್ಳುತ್ತಾರೆನೀಲಕಂಠರಾಯ ಎಲ್ಹೇರಿ.
ಜೂನ್ 5ರಂದು ನಗರದ ಸಜ್ಜಶ್ರೀ ನಗರ ಬಳಿ4 ಎಕರೆಯಲ್ಲಿ 100 ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.