ADVERTISEMENT

ಯಾದಗಿರಿ: ಓಡಿ ಹೋದ ನಕಲಿ ಟಿಕೆಟ್ ತಪಾಸಣೆ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 8:46 IST
Last Updated 11 ಜುಲೈ 2022, 8:46 IST
   

ಯಾದಗಿರಿ: ನಕಲಿ ಟಿಕೆಟ್ ತಪಾಸಣೆ ಅಧಿಕಾರಿಗೆ ನಿರ್ವಾಹಕ ಮತ್ತು ಪ್ರಯಾಣಿಕರು ಗುರುತಿನ ಚೀಟಿ ಕೇಳಿದ್ದಕ್ಕೆ ಬಸ್ಸಿಂದ ಇಳಿದು ಓಡಿ ಹೋದ ಘಟನೆ ವಡಗೇರಾ ತಾಲ್ಲೂಕಿನ ಖಾನಾಪುರದಲ್ಲಿ ನಡೆದಿದೆ.

ಟಿಕೆಟ್ ತಪಾಸಣೆ ಅಧಿಕಾರಿ ಎಂದು ಬಿಂಬಿಸಿಕೊಂಡ ವ್ಯಕ್ತಿ, ಜಿಲ್ಲೆಯಸುರಪುರದಿಂದ ಯಾದಗಿರಿ ಕಡೆ ತೆರಳುತ್ತಿದ್ದ ಕೆಎ 33, ಎಫ್ 0203 ಸಾರಿಗೆ ಬಸ್‌ಗೆಖಾನಾಪುರ ಗ್ರಾಮದಲ್ಲಿ ಹತ್ತಿದ್ದಾರೆ.‌ ಈ ವೇಳೆ ಟಿಕೆಟ್ ಪರಿಶೀಲನೆ ನಡೆಸಿದ್ದಾರೆ. ಅನುಮಾನಗೊಂಡ ನಿರ್ವಾಹಕ ಮತ್ತು ಪ್ರಯಾಣಿಕರು, ಸಫಾರಿ ಬಟ್ಟೆ ಹಾಕಿದ್ದ ನಕಲಿ ಟಿಕೆಟ್ ತಪಾಸಣೆ ಅಧಿಕಾರಿಯ ಐಡಿ ಕಾರ್ಡ್ ಕೇಳಿದ್ದಕ್ಕೆ ಬಸ್‌ನಿಂದದ ಇಳಿದು ಎಲ್ಲೂ ನಿಲ್ಲದೇ ಓಡಿಹೋಗಿದ್ದಾರೆ.

ಬಸ್ ಇಳಿಯುವಾಗ ಆತನಿಂದ ನಿರ್ವಾಹಕ ಮತ್ತು ಪ್ರಯಾಣಿಕರು ಮೊಬೈಲ್ ಕಿತ್ತಿಕೊಂಡಿದ್ದಾರೆ.

ADVERTISEMENT

ನಂತರ ಯಾದಗಿರಿಯ ಸಾರಿಗೆ ಅಧಿಕಾರಿಗೆ ನಿರ್ವಾಹಕ ಮೊಬೈಲ್ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.