ADVERTISEMENT

ಯಾದಗಿರಿ: ಇಬ್ಬರು ಮಕ್ಕಳನ್ನು ಕೊಂದು ಪರಾರಿಯಾಗಿದ್ದ‌ ತಂದೆ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 7:35 IST
Last Updated 26 ಸೆಪ್ಟೆಂಬರ್ 2025, 7:35 IST
   

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಸಮೀಪದ ದುಗನೂರ್ ಹಟ್ಟಿಯಲ್ಲಿ ಪತ್ನಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕೊಂದು ಪರಾರಿ ಆಗಿದ್ದ ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದುಗನೂರ್ ನಿವಾಸಿಯಾದ ಶರಣಪ್ಪ ಹಣಮಂತ ಕೊಲೆ ಮಾಡಿದ ಆರೋಪಿ. ಶರಣಪ್ಪ ಅವರು ತಮ್ಮ ಮಕ್ಕಳಾದ ಸಾನ್ವಿ (4) ಹಾಗೂ ಎರಡೂವರೆ ವರ್ಷದ ಭಾರ್ಗವ್‌ನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದರು. ಹಿರಿಯ ಮಗ ಹೇಮಂತ್‌ ಸಹ ಗಾಯಗೊಂಡು ಆಸ್ಪತ್ರೆಗೆ‌ ದಾಖಲಾಗಿದ್ದನು. ಈ ಸಂಬಂಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಕೌಟುಂಬಿಕ ಕಲಹದಿಂದಾಗಿ ಶರಣಪ್ಪ ಇಬ್ಬರು ಮಕ್ಕಳನ್ನು ಕೊಂದು, ಬಳಿಕ ಗ್ರಾಮದ ಸಮೀಪದ ಬೆಟ್ಟದಲ್ಲಿ ಅವಿತುಕೊಂಡಿದ್ದನು. ತಲೆ ಮರೆಸಿಕೊಂಡ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ‌ವಿಚಾರಣೆಗೆ ಒಳಪಡಿಸಲಾಗುವುದು' ಎಂದು ಪೊಲೀಸ್ ‌ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.