ADVERTISEMENT

‘ಜನಸ್ನೇಹಿ ಆಡಳಿತದಿಂದ ಸೇವೆ ಸಾರ್ಥಕ’

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:29 IST
Last Updated 8 ಮೇ 2025, 15:29 IST
ಸುರಪುರ ಲಕ್ಷ್ಮೀಪುರ ಶ್ರೀಗಿರಿ ಮಠದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ ಪತ್ತಾರ ಅವರಿಗೆ ಗುರುವಾರ ಸನ್ಮಾನಿಸಲಾಯಿತು
ಸುರಪುರ ಲಕ್ಷ್ಮೀಪುರ ಶ್ರೀಗಿರಿ ಮಠದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ ಪತ್ತಾರ ಅವರಿಗೆ ಗುರುವಾರ ಸನ್ಮಾನಿಸಲಾಯಿತು   

ಸುರಪುರ: ‘ಸರ್ಕಾರಿ ನೌಕರರು ಜನಸ್ನೇಹಿ ಆಡಳಿತ ಸಲ್ಲಿಸುವುದರಿಂದ ಅವರ ಸೇವೆ ಸಾರ್ಥಕವಾಗುತ್ತದೆ’ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀಗಿರಿ ಮಠದಲ್ಲಿ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿ ಸ್ವೀಕರಿಸಿದ ಸುರಪುರ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಚಂದ್ರಶೇಖರ ಪತ್ತಾರ ಅವರಿಗೆ ಸನ್ಮಾನಿಸಿ ಮಾತನಾಡಿದರು.

‘ಸರ್ಕಾರಿ ನೌಕರರು ಸಾರ್ವಜನಿಕರ ಕುಂದು ಕೊರತೆಗಳಿಗೆ ಸಕಾಲಕ್ಕೆ ಸ್ಪಂದಿಸಿ, ಇತ್ಯರ್ಥಪಡಿಸಿದಲ್ಲಿ ಅವರ ಕರ್ತವ್ಯ ಸಾರ್ಥಕವಾಗುತ್ತದೆ ಮತ್ತು ಇಂತಹ ಪ್ರಶಸ್ತಿಗಳು, ಗೌರವಗಳು ಲಭಿಸಲು ಸಾಧ್ಯ’ ಎಂದು ಹೇಳಿದರು.

ADVERTISEMENT

ಚಂದ್ರಶೇಖರ ಪತ್ತಾರ ಮಾತನಾಡಿ, ‘ಪ್ರಶಸ್ತಿಯಿಂದ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿಯೂ ಇನ್ನೂ ಅತ್ಯುತ್ತಮ ಸೇವೆ ಒದಗಿಸುತ್ತೇನೆ’ ಎಂದು ಹೇಳಿದರು.

ಅವರು, ತಮಗೆ ಪ್ರಶಸ್ತಿಯಿಂದ ಸಿಕ್ಕ ಹಣದಲ್ಲಿ ₹ 11 ಸಾವಿರಗಳನ್ನು ಮೌನಯೋಗಿ ಸುಶೀಲಾ ಗೋಶಾಲೆಗೆ ದೇಣಿಗೆಯಾಗಿ ನೀಡಿದರು. ಮಠದ ಭಕ್ತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.