ಯಾದಗಿರಿ: ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರಿಗೆ ವಿತರಿಸುತ್ತಿರುವ ಆಹಾರ ಕಿಟ್‌ಗೆ ನೂಕುನುಗ್ಗಲು ಉಂಟಾಗಿದೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬುಧವಾರ ಬೆಳಿಗ್ಗೆಯಿಂದ ಜನರು ಸರದಿಯಲ್ಲಿ ನಿಂತುಕೊಂಡಿದ್ದಾರೆ.
ಪುರುಷ, ಮಹಿಳೆಯರಿಗೆ ಪ್ರತ್ಯೇಕ ಸಾಲು ಮಾಡಿದ್ದರೂ ಜನರು ಹೆಚ್ಚಾಗಿರುವ ಕಾರಣ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇದೇ ವೇಳೆ ಪೊಲೀಸರೊಬ್ಬರು ಮಹಿಳೆಯನ್ನು ತಳ್ಳಿರುವುದು ಕಂಡು ಬಂದಿದೆ.
ಕೋವಿಡ್ ನಿಯಮ ಗಾಳಿಗೆ:ಆಹಾರ ಧಾನ್ಯ ಕಿಟ್ ಪಡೆಯಲು ಕಾರ್ಮಿಕರು ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ. ಮಾಸ್ಕ್ ಧರಿಸಿಲ್ಲ, ಅಂತರವೂ ಕಾಪಾಡಿಕೊಂಡಿಲ್ಲ.
ಕೆಲಸ ಬಿಟ್ಟು ಕಿಟ್‌ಗಾಗಿ ಸರದಿ:ಆಹಾರ ಧಾನ್ಯ ಕಿಟ್ ನೀಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಜನರು ಕೆಲಸ ಬಿಟ್ಟು ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ.
ಯಾದಗಿರಿ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಆಗಮಿಸಿದ್ದಾರೆ. ಬುಧವಾರ ಬೆಳಿಗ್ಗೆ ತುಂತುರು ಮಳೆಯಾಗಿದ್ದು, ಅದರಲ್ಲಿಯೇ ಕಾರ್ಮಿಕರು ನಿಂತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.