ADVERTISEMENT

₹1 ಕೋಟಿ ವೆಚ್ಚದ ವಾಲ್ಮೀಕಿ ಭವನ ಕಟ್ಟಡಕ್ಕೆ ಅಡಿಗಲ್ಲು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 5:52 IST
Last Updated 6 ಡಿಸೆಂಬರ್ 2020, 5:52 IST
5ಎಸ್ಎಚ್ಪಿ 1: ಶಹಾಪುರ ನಗರದ ಚಾಂದ ಪ್ಯಾಲೇಸ್ ಹತ್ತಿರ ಶನಿವಾರ $1ಕೋಟಿ ವೆಚ್ಚದ ವಾಲ್ಮೀಕಿ ಭವನ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ನೆರವೇರಿಸಿದರು
5ಎಸ್ಎಚ್ಪಿ 1: ಶಹಾಪುರ ನಗರದ ಚಾಂದ ಪ್ಯಾಲೇಸ್ ಹತ್ತಿರ ಶನಿವಾರ $1ಕೋಟಿ ವೆಚ್ಚದ ವಾಲ್ಮೀಕಿ ಭವನ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ನೆರವೇರಿಸಿದರು   

ಶಹಾಪುರ: ವಾಲ್ಮೀಕಿ ಭವನ ನಿರ್ಮಾಣದಿಂದ ಸಮುದಾಯದ ಯಾವುದೇ ಸಭೆ, ಸಮಾರಂಭ, ಚಿಂತನ ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗುವುದು. ಕಟ್ಟಡ ನಿರ್ಮಾಣ ಮಾಡಿದರೆ ಸಾಲದ ಜೊತೆಯಲ್ಲಿ ಸ್ವಚ್ಛತೆ ಹಾಗೂ ನಿರ್ವಹಣೆ ಮುಖ್ಯವಾಗಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದ ಚಾಂದ್ ಪ್ಯಾಲೇಸ್ ಹತ್ತಿರ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ 2012-13 ನೇ ಸಾಲಿನ ₹1 ಕೋಟಿ ವೆಚ್ಚದ ಮಹರ್ಷಿ ವಾಲ್ಮೀಕಿ ಭವನ ಕಟ್ಟಡ ಕಾಮಗಾರಿಯ ಶನಿವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಬರುವ ದಿನಗಳಲ್ಲಿ ಇನ್ನೂ ₹1 ಕೋಟಿ ಅನುದಾನ ಬಿಡುಗಡೆಗೆ ಪ್ರಾಮಾಣಿಕವಾಗಿ ಯತ್ನಿಸಲಾಗುವುದು. ನಗರದ ಸರ್ಕಾರಿ ಪದವಿ ಕಾಲೇಜಿನ ಮೈದಾನಕ್ಕೆ ಏಕಲವ್ಯ ಕ್ರೀಡಾಂಗಣ ಎಂದು ಹೆಸರಿಡಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಗೊಲ್ಲಿಪಲ್ಲಿಯ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜದ ಹಿತ ಚಿಂತನೆಗೆ ಜಾತಿರಹಿತ ಮತ್ತು ಪಕ್ಷ ರಹಿತವಾಗಿ ಕೆಲಸ ಮಾಡಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ತೊಡೆದು ಪಕ್ಷಭೇದ ಮರೆತು ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು. ಸ್ವಾರ್ಥ ಸಾಧನೆಗೆ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪ್ರೀತಿಯಿಂದ ಎಲ್ಲಾ ಸಮುದಾಯದ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಶಿಕ್ಷಣವೆ ನಮ್ಮ ಮೂಲ ಮಂತ್ರವಾಗಲಿ ಎಂದರು.

ADVERTISEMENT

ಬರುವ ದಿನದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಜೊತೆ ಮಾತನಾಡಿ ಇನ್ನು ಹೆಚ್ಚಿನ ಅನುದಾನಕ್ಕೆ ಯತ್ನಿಸೋಣ. ಶಾಸಕರು ಇದಕ್ಕೆ ಕೈಜೋಡಿಸಬೇಕು. ಅಲ್ಲದೆ ಸ್ಥಳೀಯ ಅನುದಾನದಲ್ಲಿ ಕಂಪೌಂಡ ನಿರ್ಮಾಣಕ್ಕೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ,ನಗರಸಭೆಯ ಅಧ್ಯಕ್ಷೆ ಶನಾಜ್ ಬೇಗಂ ದರ್ಬಾನ್,ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಣಮಂತರಾಯ ದೊರೆ ದಳಪತಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ, ಮಾನಸಿಂಗ್ ಚವ್ಹಾಣ, ದೇವಿಂದ್ರಪ್ಪಗೌಡ ಗೌಡಗೇರಿ, ಆರ್.ಚೆನ್ನಬಸ್ಸು ವನದುರ್ಗ, ನಾಗಪ್ಪ ಕಾಶಿರಾಜ, ಹಣಮಂತರಾಯ ಟೋಕಾಪುರ, ಹನುಮೇಗೌಡ ಮರಕಲ್,ಸುದರ್ಶನ ನಾಯಕ,ಬಸಣ್ಣ ಭಂಗಿ ಕೊಳ್ಳೂರ, ಸಿದ್ದಣ್ಣ ಮಾನಸೂಣಗಿ,ರವೀಂದ್ರ ಯಕ್ಷಿಂತಿ, ತಿರುಪತಿ ನಾಯಕ, ಹೊನ್ನಯ್ಯ ಗಟ್ಟಿ ಕೊಳ್ಳೂರ, ರಾಘವೇಂದ್ರ ಯಕ್ಷಿಂತಿ, ಸಣ್ಣ ನಿಂಗಣ್ಣ ನಾಯ್ಕೋಡಿ, ಶೇಖರ ದೊರೆ ಕಕ್ಕಸಗೇರಾ, ಹಣಮಂತ್ರಾಯಗೌಡ ರಾಕಂಗೇರ, ಹಣಮಂತ ಟೋಕಾಪುರ, ಮಹಾದೇವಪ್ಪ ದೇಸಾಯಿ,ಜಯರಾಜ ದೊರೆ ಆಲ್ದಾಳ, ಮಲ್ಲಣ್ಣ ಹೊಸಮನಿ,ಶರಣಪ್ಪ ಪ್ಯಾಟಿ,ಅಯ್ಯಪ್ಪ ಸ್ವಾಮಿ ವನದುರ್ಗ, ಅಮರೇಶ ಇಟಗಿ, ರಾಜು ಸಾವೂರ, ತಮ್ಮಣ್ಣ ರಾಂಪುರ, ಮಾನಶಪ್ಪ ನಾಗನಟಗಿ, ದುರ್ಗಪ್ಪ ನಾಯಕ,ಬಸವರಾಜ ಮುಡಬೂಳ,ಮಹಾದೇವ, ದೇವು ಗಂಗನಾಳ,ಈರಣ್ಣ ಹವಾಲ್ದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.