ಹುಣಸಗಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಂ.ಎನ್.ಬಳಿ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಶುಕ್ರವಾರದಿಂದ ಎರಡು ದಿನಗಳವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಿತು.
ಶಿಬಿರಕ್ಕೆ ತಹಶೀಲ್ದಾರ್ ಬಸವರಾಜ ಎಂ. ಚಾಲನೆ ನೀಡಿ ಮಾತನಾಡಿ, ದೃಷ್ಟಿ ಇದ್ದರೆ ಮಾತ್ರ ಸೃಷ್ಟಿ ಎನ್ನುವ ನುಡಿಯಂತೆ ಹುಣಸಗಿಯಲ್ಲಿ ನೂರಾರು ಜನರ ಅನುಕೂಲಕ್ಕಾಗಿ ಈ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸದಿರು.
ಸುರಪುರದ ತಾಲ್ಲೂಕು ವೈದ್ಯಾಧಿಕಾರಿ ಡಾ.ಆರ್.ವಿನಾಯಕ ಮಾತನಾಡಿ, ‘ಸಾರ್ವಜನಿಕರಿಗೆ ಇಂತಹ ಶಿಬಿರಗಳು ಹೆಚ್ಚು ಸಹಕಾರಿಯಾಗಿವೆ. ಬೆಂಗಳೂರನ ವಿವೇಕಾನಂದ ಸೇವಾಶ್ರಮದ ವೈದ್ಯರು, ಶಸ್ತ್ರ ಚಿಕಿತ್ಸಕರು ಸೇರಿದಂತೆ ಸುಮಾರು 25 ಜನರ ತಂಡ ಬಂದಿದೆ’ ಎಂದು ಹೇಳಿದರು.
ಶುಕ್ರವಾರ ಸಂಜೆವರೆಗೂ ಸುಮಾರು 300ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಲಾಗಿದೆ. 172ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆರೋಗ್ಯ ಕೇಂದ್ರದಿಂದ ಮಾಹಿತಿ ತಿಳಿದಿದೆ.
ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಹಿರಿಯರಾದ ಕಿಡಿಗಣ್ಣಯ್ಯ ಮಠ, ಎಸ್.ಎಂ. ವಿರಕ್ತಮಠ, ವೀರೇಶ ಚಿಂಚೋಳಿ, ಬಸಣ್ಣ ದೇಸಾಯಿ, ಎನ್.ಎಂ. ಬಳಿ, ಎಂ.ಎಸ್.ಚಂದಾ, ಮಹಾದೇವಪ್ಪ ಬಳಿ ಸೇರಿದಂತೆ ಸ್ಥಳೀಯ ವೈದ್ಯರು ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.