ADVERTISEMENT

ಹುಣಸಗಿ | ಗಾಂಜಾ ಮಾರಾಟ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 4:49 IST
Last Updated 27 ಆಗಸ್ಟ್ 2025, 4:49 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಹುಣಸಗಿ: ತಾಲ್ಲೂಕಿನ ಆಗತೀರ್ಥ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ದಾವಲಸಾಬ ಮಕಾಂದಾರ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಖಚಿತ ಮಾಹಿತಿ ಮೇರೆಗೆ ಹುಣಸಗಿ ಸಿಪಿಐ ರವಿಕುಮಾರ್ ನೇತೃತ್ವದಲ್ಲಿ ಪಿಎಸ್ಐ ರಾಹುಲ್ ಪಾವಡೆ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದು ಆರೋಪಿಯನ್ನು ಬಂಧಿಸಿದ್ದಾಗಿ ತಿಳಿದು ಬಂದಿದೆ. ಗಾಂಜಾ ಗಿಡ ಬೆಳೆದಿದ್ದ ಆರೋಪಿ ಅಗ್ನಿ ಗ್ರಾಮದ ಈರಮ್ಮ ಪೂಜಾರಿ ಪರಾರಿಯಾಗಿದ್ದಾಳೆ.

ಆರೋಪಿಯಿಂದ ₹ 86 ಸಾವಿರ ಮೌಲ್ಯದ 860 ಗ್ರಾಂ ಒಣಗಿದ ಗಾಂಜಾ ಹಾಗೂ ಎರಡನೂರು ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿವೈಎಸ್ಪಿ ಜಾವೇದ್ ಇನಾಮದಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.