ADVERTISEMENT

‘ಹೂಗಾರ ಸಮುದಾಯಕ್ಕೆ ಪ್ಯಾಕೇಜ್ ನೀಡಿ’

​ಪ್ರಜಾವಾಣಿ ವಾರ್ತೆ
Published 29 ಮೇ 2020, 17:06 IST
Last Updated 29 ಮೇ 2020, 17:06 IST
ಅಖಿಲ ಕರ್ನಾಟಕ ಹೂಗಾರ ಯುವಸೇನೆಯ ರಾಜ್ಯ ಸಂಚಾಲಕ ಬನ್ನಪ್ಪ ಎಂ. ಪೂಜಾರ ಮೈಲಾಪುರ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು
ಅಖಿಲ ಕರ್ನಾಟಕ ಹೂಗಾರ ಯುವಸೇನೆಯ ರಾಜ್ಯ ಸಂಚಾಲಕ ಬನ್ನಪ್ಪ ಎಂ. ಪೂಜಾರ ಮೈಲಾಪುರ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು   

ಯಾದಗಿರಿ: ಹೂಗಾರ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಲು ಅಖಿಲ ಕರ್ನಾಟಕ ಹೂಗಾರ ಯುವಸೇನೆಯ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.

‘ಲಾಕ್‌ಡೌನ್‌ ಪರಿಣಾಮ ತತ್ತರಿಸಿ ಹೋಗಿರುವ ಹೂಗಾರ ಸಮಾಜಕ್ಕೆ ವಿಶೇಷ ಪ್ಯಾಕೇಜ್‌ ನೀಡಬೇಕು. ಕಳೆದ 2 ತಿಂಗಳಿಂದ ಹೂ ಕಟ್ಟುವವರು, ಬಾಸಿಂಗ ಕಟ್ಟುವವರು, ಹೂ ಪತ್ರಿ ನೀಡುವವರು, ಗುಡಿ ಪೂಜಾರಿಕೆ ಮಾಡುವವರು ಕೆಲಸವಿಲ್ಲದೆ ಖಾಲಿ ಕುಳಿತ್ತಿದ್ದಾರೆ. ಬೇರೆ ಸಮುದಾಯಕ್ಕೆ ಕೊಟ್ಟಂತೆ ನಮ್ಮ ಸಮುದಾಯಕ್ಕೂ ನೆರವು ನೀಡಬೇಕು’ ಎಂದು ಅಖಿಲ ಕರ್ನಾಟಕ ಹೂಗಾರ ಯುವಸೇನೆಯ ರಾಜ್ಯ ಸಂಚಾಲಕ ಬನ್ನಪ್ಪ ಎಂ.ಪೂಜಾರ ಮೈಲಾಪುರ ನೇತೃತ್ವದಲ್ಲಿ ಮನವಿ ಮಾಡಲಾಯಿತು.

ಈ ವೇಳೆ ಶಹಾಪುರ ತಾಲ್ಲೂಕು ಹೂಗಾರ ಮಹಾಸಭಾದ ಅಧ್ಯಕ್ಷ ಭೀಮಣ್ಣ ಹೂಗಾರ ಹೊತಪೇಟ, ಯುವಸೇನೆಯ ಜಿಲ್ಲಾಧ್ಯಕ್ಷ ಶರಭು ಹೂಗಾರ, ಪಶುವೈದ್ಯ ಬಸವರಾಜ ಹೂಗಾರ ಮಳಖೇಡ, ಬಸವರಾಜ ಹೂಗಾರ ಖಾನಾಪುರ, ವಿಜಯ್ ಕುಮಾರ, ಈಶ್ವರ ಪೂಜಾರ, ಶ್ರೀಶೈಲ ಪೂಜಾರ, ಮಂಜುನಾಥ್ ಪಾಟೀಲ, ಪರಮೇಶ್ವರ ಪೂಜಾರ, ಅರುಣ್ ಕುಮಾರ ಹೂಗಾರ, ಸಿದ್ದು ಟಿ. ಪೂಜಾರ, ಉತ್ತಪ್ಪ ಹೂಗಾರ ನೀಲಹಳ್ಳಿ, ಸಿದ್ದು ಹೂಗಾರ ನೀಲಹಳ್ಳಿ, ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.