ADVERTISEMENT

ದೇವರಗಡ್ಡಿ ಗದ್ದೆಮ್ಮ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 2:07 IST
Last Updated 31 ಜನವರಿ 2021, 2:07 IST
ಹುಣಸಗಿ ತಾಲ್ಲೂಕಿನ ದೇವರಗಡ್ಡಿ ಗ್ರಾಮದಲ್ಲಿ ಗದ್ದೆಮ್ಮ ದೇವಿಯ ಜಾತ್ರೆಯ ನಿಮಿತ್ಯ ವೈಭವದ ರಥೋತ್ಸವ ಜರುಗಿತು
ಹುಣಸಗಿ ತಾಲ್ಲೂಕಿನ ದೇವರಗಡ್ಡಿ ಗ್ರಾಮದಲ್ಲಿ ಗದ್ದೆಮ್ಮ ದೇವಿಯ ಜಾತ್ರೆಯ ನಿಮಿತ್ಯ ವೈಭವದ ರಥೋತ್ಸವ ಜರುಗಿತು   

ಹುಣಸಗಿ: ತಾಲ್ಲೂಕಿನ ದೇವರಗಡ್ಡಿ (ಜಂಗಿನಗಡ್ಡಿ) ಗ್ರಾಮದಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರ ಜಯಘೋಷಗಳ ಮಧ್ಯೆ ಗದ್ದೆಮ್ಮ ದೇವಿಯ ರಥೋತ್ಸವ ವೈಭವದಿಂದ ಜರುಗಿತು.

ಜಾತ್ರೆಯ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಹಾಗೂ ವೀಳ್ಯದೆಲೆಗಳಿಂದ ದೇವಿಯನ್ನು ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ದೇವಿಯ ಮುಖ್ಯ ಅರ್ಚಕರು ಹಾಗೂ ಮಾಳಪ್ಪಯ್ಯ ಅವರು ಬಾಬುಗಾರ ಮನೆತನದಿಂದ ತಂದಿರುವ ಪೂರ್ಣಕುಂಭವನ್ನು ದೇವಿಯ ದೇಗುಲಕ್ಕೆ ಮೀಸಲು ಅಕ್ಕಿ ಪಾಯಸ ತಯಾರಿಸಿ ನೈವೇದ್ಯ ಅರ್ಪಿಸಿದರು.

ಸಂಜೆ ವಿವಿಧ ಪುಷ್ಪಗಳು, ಬಣ್ಣದ ನಿಶಾನೆ ಹಾಗೂ ಕಳಸದಿಂದ ಅಲಂಕೃತಗೊಳಿಸಲಾಗಿದ್ದ ದೇವತೆಯ ರಥವನ್ನು ಭಕ್ತರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರೆ ಇನ್ನುಳಿದವರು ಜಯಘೋಷಣೆ ಕೂಗಿ ಆನಂದಿಸಿದರು.

ADVERTISEMENT

ರೋಡಲಬಂಡಾ, ಹಿರೇಜಾವೂರು, ಜಂಗಿರಾಂಪುರ, ಗಡಿ ಜಾವೂರು, ರಾಂಪೂರು, ಮೇಲಿನಗಡ್ಡಿ ಮತ್ತು ಜಂಗಿನಗಡ್ಡಿ, ಕೊಡೇಕಲ್ಲ, ನಾರಾಯಣಪುರ, ವಿಜಯಪುರ, ಲಿಂಗಸುಗೂರು, ಮುದ್ದೇಬಿಹಾಳ, ನಾಲತವಾಡ, ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.