ADVERTISEMENT

‘ಗಿಡ ಬೆಳೆಸಿ ಪರಿಸರ ಸಂರಕ್ಷಿಸಿ’: ನರೇಂದ್ರಕುಮಾರ್ ದೇವಗಾಂವ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 15:27 IST
Last Updated 7 ಜೂನ್ 2025, 15:27 IST
ಯಾದಗಿರಿ ನಗರ ಹೊರವಲಯದ ಚಿತ್ತಾಪುರ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸಸಿ ನೆಡಲಾಯಿತು
ಯಾದಗಿರಿ ನಗರ ಹೊರವಲಯದ ಚಿತ್ತಾಪುರ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸಸಿ ನೆಡಲಾಯಿತು   

ಯಾದಗಿರಿ: ಹಸಿರಿನಿಂದ ಉಸಿರು. ಮಾನವ, ಜೀವಸಂಕುಲ ಉಳಿಯಬೇಕೆಂದರೆ ಪ್ರತಿಯೊಬ್ಬರೂ ಸಸಿಗಳನ್ನು ಬೆಳಸಿ ಸಂರಕ್ಷಣೆ ಮಾಡಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ನಿರ್ದೇಶಕ ನರೇಂದ್ರಕುಮಾರ್ ದೇವಗಾಂವ್ ಹೇಳಿದರು.

ನಗರ ಹೊರವಲಯದ ಚಿತ್ತಾಪುರ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸಸಿಗಳನ್ನು ನೆಟ್ಟು ಮಾತನಾಡಿದ ಅವರು, ಪರಿಸರ ದಿನ ಒಂದು ದಿನಕ್ಕೆ ಸೀಮಿತವಾಗದೆ ಪ್ರದಿನವೂ ಗಿಡಗಳನ್ನು ಬೆಳೆಸಿ ಪೋಷಿಸಬೇಕು. ಪ್ರಸ್ತುತ ಜನಸಾಮಾನ್ಯರ ಆರೋಗ್ಯಕ್ಕೆ ಶುದ್ಧ ವಾಯುವಿನ ಅವಶ್ಯವಾಗಿದೆ. ಆದ್ದರಿಂದ ಸಸಿ ನೆಟ್ಟು ನಾಡನ್ನು ಉಳಿಸಬೇಕಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT