ಗುರುಮಠಕಲ್: ಹತ್ತಿರದ ಚಪೆಟ್ಲಾ ಗ್ರಾಮದಲ್ಲಿ ಶನಿವಾರ ಗ್ರಾಮ ದೇವತೆ ಮಾತೆ ಮಹೇಶ್ವರಿದೇವಿ ದೇವಸ್ಥಾನದ ದೇವರ ಹೋರಿ (ನಂದಿ) ಶನಿವಾರ ಮೃತಪಟ್ಟಿದ್ದು, ಗ್ರಾಮಸ್ಥರು ಧಾರ್ಮಿಕ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು.
ದೇವರ ಹೋರಿಯ ಕಳೇಬರವನ್ನು ಟ್ರ್ಯಾಕ್ಟರ್ ಮೇಲಿರಿಸಿ ಪೂಜೆ ಸಲ್ಲಿಸಿದ ಗ್ರಾಮಸ್ಥರು, ಮಂಗಳವಾದ್ಯಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳ ಮೂಲಕ ಅಂತಿಮ ಯಾತ್ರೆಯನ್ನು ನಡೆಸಿದರು.
ಮಂಗಳವಾದ್ಯಗಳ ಸಮೇತ ಮೆರವಣಿಗೆಯ ಮೂಲಕ ಗ್ರಾಮದೇವತೆ ಮಾತೆ ಮಹೇಶ್ವರಿ ದೇವದಿ ದೇವಸ್ಥಾನದ ಬೆಟ್ಟಕ್ಕೆ ತಲುಪಿದ ನಂತರ ಧಾರ್ಮಿಕ ವಿಧಿಗಳಂತೆ ದೇವರ ಹೋರಿಗೆ ಅಂತಿ ಪೂಜೆ ಮತ್ತು ಮಂಗಳಾರತಿಯನ್ನು ಸಲ್ಲಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.