ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುಪೂರ್ಣಿಮೆಯನ್ನು ಮಠ, ದೇವಸ್ಥಾನ, ಶಾಲಾ–ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಅಬ್ಬೆತುಮಕೂರು ಮಠ: ತಾಲ್ಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಗುರುವಾರ ಸಾವಿರಾರು ಭಕ್ತರು ಭಕ್ತಿ ಪೂರ್ವಕವಾಗಿ ಹಮ್ಮಿಕೊಂಡಿದ್ದ ವಿಶ್ವಾರಾಧ್ಯ ಗುರುವಿನ ಗುರು ಪೂಜೆಯನ್ನು ಮಠದ ಗಂಗಾಧರ ಸ್ವಾಮೀಜಿಗೆ ಮತ್ತು ಕಿರಿಯ ಸ್ವಾಮಿ ಶಿವಶೇಖರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಿತು.
ಈ ವೇಳೆ ಸೇರಿದ ಅಪಾರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಗುರುವಿನ ಕರಣೆಯೊಂದೇ ಪ್ರತಿಯೊಬ್ಬರು ಬದುಕಿನ ದಡ ಸೇರಲು ಕಾರಣವಾಗುತ್ತದೆ ಎಂದರು.
ವಿಶ್ವಾರಾಧ್ಯರೆಂಬ ಮಹಾಗುರುವನ್ನು ನಂಬಿ ನಡೆದುಕೊಂಡವರು ಜೀವನದಲ್ಲಿ ನೆಲಕಚ್ಚಿದ ಉದಾಹರಣೆಯೇ ಇಲ್ಲ. ಆದರೆ, ಬೇಡುವ ಭಕ್ತಿ, ಭಾವ ಶುದ್ಧವಾಗಿರಬೇಕು. ಅಂದಾಗ ಅದು ಫಲ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತರೆಡ್ಡಿ ದೇಸಾಯಿ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ವಿಶ್ವಾರಾಧ್ಯ ಸಮಿತಿ ಹಿರಿಯ ಮುಖಂಡ ವಿಶ್ವನಾಥ ಶಿರವಾಳ, ವಕ್ತಾರ ಪ್ರೊ.ಸುಭಾಷಚಂದ್ರ ಕೌಲಗಿ, ಕೃಷ್ಣ ದಾಸನಕೇರಿ ಭಾಗವಹಿಸಿದ್ದರು.
ಬಸವರಾಜ ಶಾಸ್ತ್ರಿ ಶಹಾಪುರ ನಿರೂಪಿಸಿದರು. ಮಠದ ಸಂಗೀತ ಬಳಗದಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.
ಭಕ್ತಿ ಭಾವೈಕ್ಯ ಮೆರೆದ ಗುರುಭಕ್ತರು:
ಗುರು ಪೂರ್ಣಿಮೆ ಪ್ರಯುಕ್ತ ನಗರದ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರುವಾರ ಭಕ್ತರಿಂದ ವಿಶೇಷ ಪೂಜೆಗಳು ನೆರವೇರಿದವು.
ಬೆಳಿಗ್ಗೆ ದೇವರಿಗೆ ವಿಶೇಷ ಅಲಂಕಾರದ ಜೊತೆ ಅಭಿಷೇಕ, ಮಹಾಮಂಗಳಾರತಿ, ಭಕ್ತಿ ಗೀತೆಯೊಂದಿಗೆ ಭಕ್ತರು ದೇವರ ಸ್ಮರಣೆ ಮಾಡಿ ಸಾಯಿ ಬಾಬಾರ ಕೃಪೆಗೆ ಪಾತ್ರರಾದರು. ಈ ವೇಳೆಯಲ್ಲಿ ದೇವಸ್ಥಾನ ಸಮಿತಿ ವತಿಯಿಂದ ಸಾವಿರಾರು ಭಕ್ತರಿಗೆ ಮಹಾ ಪ್ರಸಾದ ವಿತರಿಸಲಾಯಿತು.
ಸಾಯಿ ಬಾಬಾ ಭಕ್ತರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿ ಬಾಬಾರ ಆಶೀರ್ವಾದ ಪಡೆದರು.
ಈ ವೇಳೆಯಲ್ಲಿ ಶಿರಡಿ ಸಾಯಿ ಬಾಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯಕ, ಉಪಾಧ್ಯಕ್ಷರಾದ ಅಶೋಕ ವಾಟ್ಕರ್, ಬಸವರಾಜ್ ಬಿಳ್ಹಾರ, ಬಸವರಾಜ ಹತ್ತಿಕುಣಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಬೀರನೂರ, ಅಶೋಕ ಕರಣಿ, ಅನಿಲ್ ರಾವೂರ, ಅಶೋಕ ಚಂಡ್ರಿಕಿ, ಬಸವರಾಜ ಅರಳಿ, ವೆಂಕಟೇಶ ಮೇಸ್ತ್ರಿ, ಜಗನ್ನಾಥ ಚಿಂತನಳ್ಳಿ, ದೇವಸ್ಥಾನದ ಪ್ರಧಾನ ಅರ್ಚಕ ನಂದ ಕಿಶೋರ್, ಸೇರಿದಂತೆ ಅಪಾರ ಸಾಯಿ ಬಾಬಾ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.