ADVERTISEMENT

ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 8:58 IST
Last Updated 7 ಜುಲೈ 2021, 8:58 IST
ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಸಂಯೋಜಕ ಶಿವರಾಜ ಸಾಕಾ ಅವರು ಶುಭಶ್ರೀಗೆ ಪ್ರಮಾಣಪತ್ರ ವಿತರಿಸಿದರು
ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಸಂಯೋಜಕ ಶಿವರಾಜ ಸಾಕಾ ಅವರು ಶುಭಶ್ರೀಗೆ ಪ್ರಮಾಣಪತ್ರ ವಿತರಿಸಿದರು   

ಗುರುಮಠಕಲ್: ಇಲ್ಲಿನ ಖಾಸಗಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಶುಭಶ್ರೀ ರಾಜು ವಿಶ್ವಕರ್ಮ (11) ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಅಚೀವರ್ಸ್‌ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನಪಡೆದಿದ್ದಾಳೆ.

ಪ್ರಾಣಿ, ಪಕ್ಷಿ ಹಾಗೂ ತರಕಾರಿಗಳ ತಲಾ ಇಪ್ಪತ್ತು ಹಾಗೂ ಇತರ ವಸ್ತುಗಳು ಸೇರಿದಂತೆ 70 ಸಾಧಾರಣ ಜನಬಳಕೆಯ ಹೆಸರುಗಳು ಹಾಗೂ ಅವುಗಳ ವೈಜ್ಞಾನಿಕ ಹೆಸರುಗಳು ಸೇರಿ ಒಟ್ಟು 140 ಹೆಸರುಗಳನ್ನು 55 ಸೆಕೆಂಡುಗಳಲ್ಲಿ ಗುರುತಿಸಿ ಹೇಳುವ ಸಾಮರ್ಥ್ಯವನ್ನು ಬಾಲಕಿ ಹೊಂದಿದ್ದಾಳೆ.

ಶಿಕ್ಷಕಿ ವಿಜಯಲಕ್ಷ್ಮಿ ಮಾರ್ಗದರ್ಶನ ನೀಡಿ, ತರಬೇತುಗೊಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.