ADVERTISEMENT

ಹಸಿಬರ ಘೋಷಿಸಿ, ಪರಿಹಾರ ವಿತರಿಸಿ: ಭೀಮುನಾಯಕ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 7:59 IST
Last Updated 24 ಅಕ್ಟೋಬರ್ 2025, 7:59 IST
ಯಾದಗಿರಿ ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ರಾಜ್ಯೋತ್ಸವದ ಪೂರ್ವಭಾವಿ ಸಭೆ ಜರುಗಿತು.
ಯಾದಗಿರಿ ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ರಾಜ್ಯೋತ್ಸವದ ಪೂರ್ವಭಾವಿ ಸಭೆ ಜರುಗಿತು.   

ಯಾದಗಿರಿ: ಕಲ್ಯಾಣ ಕರ್ನಾಟಕದ ಭೀಮಾನದಿ ಪಾತ್ರದ ರೈತರು ಅತಿವೃಷ್ಟಿಯಿಂದ ಹಸಿಬರದ ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗಳು ನೀರು ಪಾಲಾಗಿವೆ. ಕೂಡಲೇಹಸಿಬರ ಘೋಷಿಸಿ, ರೈತರಿಗೆ ಪರಿಹಾರ ವಿತರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಭೀಮುನಾಯಕ ಒತ್ತಾಯಿಸಿದರು.

ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ತಾಲ್ಲೂಕು ಕರವೇ ವತಿಯಿಂದ ಜರುಗಿದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಸಿಬರ ಘೋಷಿಸಿ,ಮುಂಗಡ ರೂ.೧೦ ಸಾವಿರ ರೈತರ ಖಾತೆಗೆ ಸಮಾಯಿಸಬೇಕು. ಉಳಿದಂತೆ ಪರಿಹಾರವನ್ನೂ ವಿತರಿಸಬೇಕು ಎಂದು ಹಲವುಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂಧಿಸುತ್ತಿಲ್ಲ ಎಂದು ಆಕ್ರೋಶಗೊಂಡರು.

ಸಚಿವರು, ಶಾಸಕರು ರೈತರಪರ ಮಾತನಾಡಬೇಕಿತ್ತು. ಆದರೆ, ಮೌನವಾಗಿರುವುದು ಖಂಡನೀಯ. ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಒಂದುವಾರದಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿಗಳು ಈಗ ಕಾಣೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲು ಮಾಳಿಕೇರಿ ಮಾತನಾಡಿ, ಅದ್ಧೂರಿ ರಾಜ್ಯೋತ್ಸವಕ್ಕೆ ಕರವೇ ಕಾರ್ಯಕರ್ತರು ಸಿದ್ಧ಼ತೆ ಮಾಡುವಂತೆ ಕೋರಿದರು.

ವೇದಿಕೆಯ ಸುರೇಶ ಬೆಳಗುಂದಿ, ಮಲ್ಲಿಕಾರ್ಜುನ ಕನ್ನಡಿ, ಶರಣು ಮಡಿವಾಳ, ಬಸ್ಸು ನಾಯಕ ಸೈದಾಪೂರ, ರಫೀಕ್ ವರ್ಕನಳ್ಳಿ, ಸಲೀಮ್ ಚಾವುಸ್, ಸೈದಪ್ಪ ಗೌಡಗೇರಾ, ಮಹೇಶ ಠಾಣಗುಂದಿ, ಸಾಗರ ಸೈದಾಪುರ, ಮಲ್ಲು ಬಾಡಿಯಾಳ, ಹಣಮಂತ ಯಡ್ಡಳ್ಳಿ, ರಾಜು ಗೌಡಗೇರಿ, ವೆಂಕಟೇಶ ಕೌಳೂರು, ದುರುಗಪ್ಪ ಬಳಿಚಕ್ರ, ಸಾಬು ನಾಗರಬಂಡಿ, ಹಣಮಂತ ಮುಂಡರಗಿ, ಈಶಪ್ಪ, ಅಂಜು ಬಾಗಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.