
ಸುರಪುರ: ಸಮೀಪದ ರಂಗಂಪೇಟೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗ ದಳ ನೇತೃತ್ವದಲ್ಲಿ ಹನುಮ ಮಾಲಾ ಅಭಿಯಾನ ನಿಮಿತ್ತ ಹನುಮ ಮಾಲಾಧಾರಿಗಳಿಂದ ಮಂಗಳವಾರ ಸಂಕೀರ್ತನಾ ಯಾತ್ರೆ ಹಾಗೂ ಸಾರ್ವಜನಿಕ ಸಮಾರಂಭ ಜರುಗಿತು.
ರಂಗಂಪೇಟೆ-ತಿಮ್ಮಾಪುರದ ಆಂಜನೇಯ ದೇವಸ್ಥಾನದಿಂದ ಮರಗಮ್ಮ ದೇವಸ್ಥಾನದವರೆಗೆ ಜೈ ಶ್ರೀರಾಮ...ಜೈ ಭಜರಂಗಿ...ಭಕ್ತಿ ಘೋಷಣೆಯೊಂದಿಗೆ ಯಾತ್ರೆ ನಡೆಸಿದರು. ನಂತರ ಮರಗಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸಮಾರಂಭ ಜರುಗಿತು.
ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ, ಚಟ್ನಳ್ಳಿಯ ವಿಶ್ವರಾಧ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗೋರಕ್ಷಾ ಪ್ರಮುಖರಾದ ಕೇಶವರಾಜು, ಕರ್ನಾಟಕ ಉತ್ತರ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಸೇಡಂ, ಕಲಬುರಗಿ ವಿಭಾಗದ ಅಂಬರೇಶ ಸುಲೇಗಾಂವ, ಬಜರಂದಳ ಕಲಬುರಗಿ ವಿಭಾಗದ ಸಂಯೋಜಕ ಅಜೇಯಕುಮಾರ ಬಿದರಿ ಅನೇಕರಿದ್ದರು.
ವಕೀಲ ಮಧುಸೂದನ ಮುಂದಡಾ ಮುಖ್ಯ ಅತಿಥಿಯಾಗಿದ್ದರು. ಬಜರಂಗದಳದ ಕಲಬುರಗಿ ವಿಭಾಗದ ಶಿವುಕುಮಾರ ಸಕ್ಲೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‍ಪಿ ಜಾವೇದ್ ಇನಾಂದಾರ್ ನೇತೃತ್ವದಲ್ಲಿ ಪಿಐ ಉಮೇಶ ನಾಯಕ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.