ADVERTISEMENT

ಹುಣಸಗಿ: ಸಂಭ್ರಮದ ಶ್ರೀರಾಮನವಮಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 12:39 IST
Last Updated 13 ಏಪ್ರಿಲ್ 2019, 12:39 IST
ಹುಣಸಗಿ ಪಟ್ಟಣದ ವರ ಹಳ್ಳೇರಾಯ ದೇವಸ್ಥಾನದಲ್ಲಿ ಶನಿವಾರ  ರಾಮನವಮಿ ಉತ್ಸವ ನಡೆಯಿತು 
ಹುಣಸಗಿ ಪಟ್ಟಣದ ವರ ಹಳ್ಳೇರಾಯ ದೇವಸ್ಥಾನದಲ್ಲಿ ಶನಿವಾರ  ರಾಮನವಮಿ ಉತ್ಸವ ನಡೆಯಿತು    

ಹುಣಸಗಿ: ಪಟ್ಟಣದ ವರಹಳ್ಳೇರಾಯ ದೇವಸ್ಥಾನದಲ್ಲಿ ಶನಿವಾರ ಶ್ರೀರಾಮ ನವಮಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಜಯಾಚಾರ್ಯ ಜೋಶಿ ಕಕ್ಕೇರಿ ಮಾತನಾಡಿ, ‘ನಿತ್ಯ ಶ್ರೀ ರಾಮನಾಮ ಜಪದಿಂದ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ. ಅದಕ್ಕಾಗಿಯೇ ವಿಜಯದಾಸರು, ಗೋಪಾಲದಾಸರು, ಪುರಂದರ ದಾಸರು ಸೇರಿದಂತೆ ಎಲ್ಲ ದಾಸ ಶ್ರೇಷ್ಟರೂ ರಾಮನಾಮದ ಮಹತ್ವದ ಕುರಿತು ತಮ್ಮ ಕೀರ್ತನೆಗಳಲ್ಲಿ ಹಾಡಿ ಹೊಗಳಿದ್ದಾರೆ’ ಎಂದರು.

ವಿಷ್ಣುವಿನ ಏಳನೇ ಅವತಾರವಾಗಿ ರಾಮನವಮಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರು ರಾಮಾಯಣ ಪಾರಾಯಣ ಮಾಡುವುದು, ಶ್ರೀರಾಮಚರಿತ್ರೆ ತಿಳಿದುಕೊಳ್ಳುವುದರಿಂದ ಮತ್ತೆ ರಾಮರಾಜ್ಯ ಆಗುವುದರಲ್ಲಿ ಎರಡು ಮಾತಿಲ್ಲ. ಕಥೆಗಳ ಮೂಲಕ ರಾಮಾಯಣ ವಿವರಿಸಿದರು.

ADVERTISEMENT

ವರಹಳ್ಳೇರಾಯ ದೇವರ ಪೂಜೆ, ಅಭಿಷೇಕ ಮತ್ತು ರಾಮದೇವರ ತೊಟ್ಟಿಲೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಸಾದ ಮತ್ತು ಪಾನಕ ವಿತರಿಸಲಾಯಿತು.

ಪ್ರಮುಖರಾದ ಪ್ರಹ್ಲಾದ ಆಚಾರ್ಯ ಜೋಶಿ, ವೆಂಕಟೇಶಾಚಾರ್ಯ ಅರಳಿಗಿಡಿದ, ವಿಜಯಾಚಾರ್ಯ, ಬೈಚಬಾಳ, ರವಿಂದ್ರ ಜಮದರಖಾನಿ, ಚಂದ್ರಕಾಂತ ದೇಶಪಾಂಡೆ, ಲಕ್ಷಿಕಾಂತ ಜಮದರಖಾನ, ಕೃಷ್ಣಾ ದೇಶಪಾಂಡೆ, ಶಾಮಸುಂದರ ದೇಶಪಾಂಡೆ, ಕಲ್ಯಾಣರಾವ, ವ್ಯಾಸರಾಜ ಜಮದರಖಾನ, ಚಿದಂಬರರಾವ ಕುಲಕರ್ಣಿ, ಭಾಗ್ಯಶ್ರೀ ದೇಶಪಾಂಡೆ, ವಿಜಯಲಕ್ಷ್ಮಿ ಕುಲಕರ್ಣಿ, ಭಾವನಾ ದೇಶಪಾಂಡೆ, ಸುವರ್ಣಾ ಜಮದರಖಾನ, ವಿದ್ಯಾ ಜಮದರದಖಾನ, ಮಂಜುಳಾ ಅರಳಿಗಿಡದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.