ADVERTISEMENT

ಯರಗೋಳ; ಆರೋಗ್ಯ ಮೇಳ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 4:55 IST
Last Updated 29 ಸೆಪ್ಟೆಂಬರ್ 2022, 4:55 IST
ಯರಗೋಳದಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಗರ್ಭೀಣಿಯರಿಗೆ ಸೀಮಂತ ಮಾಡಲಾಯಿತು
ಯರಗೋಳದಲ್ಲಿ ನಡೆದ ಆರೋಗ್ಯ ಮೇಳದಲ್ಲಿ ಗರ್ಭೀಣಿಯರಿಗೆ ಸೀಮಂತ ಮಾಡಲಾಯಿತು   

ಯರಗೋಳ: ಗ್ರಾಮದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಯರಗೋಳ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಮೇಳ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹಿರೇಗೌಡರ ‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರತಿ ವರ್ಷ ಒಬ್ಬ ವ್ಯಕ್ತಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಪಡೆಯಬಹುದು’ ಎಂದರು.

30 ವರ್ಷ ಮೇಲ್ಪಟ್ಟವರಿಗೆ ಬಿಪಿ, ಶುಗರ್, ಅಲ್ಲಿನ ತಪಾಸಣೆ ಮಾಡಲಾಯಿತು. ಪೌಷ್ಟಿಕ ಆಹಾರದ ಬಗ್ಗೆ ತಿಳಿವಳಿಕೆ, ಗರ್ಭೀಣಿಯರಿಗೆ ಸೀಮಂತ ನೆರವೇರಿಸಲಾಯಿತು.

ADVERTISEMENT

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಹನುಮಂತರೆಡ್ಡಿ, ಪಿಡಿಒ ಕಲ್ಯಾಣ ಕುಮಾರ, ಪ್ರಾಂಶುಪಾಲ ಬೀಸ್ಲಪ್ಪ ಕಟ್ಟಿಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮರಾಯ ಗೋಡಿಕಾರ್, ಹುಸೇನಪ್ಪ, ಆಡಳಿತ ವೈದ್ಯಾಧಿಕಾರಿ ಡಾ‌‌.ಜಗದೀಶ್ ಎಂ ಪಾಟೀಲ್, ವೈದ್ಯರಾದ ಡಾ. ಮಹೇಶ್, ಮಕ್ಕಳ ಕಲ್ಯಾಣ ಇಲಾಖೆಯ ರೇಣುಕಾ, ತುಳಸೀ ರಾಮ್, ಆರೋಗ್ಯ ನಿರೀಕ್ಷಣಾದಿಕಾರಿ ಶಿವರಾಜ, ಅಂಬ್ರೇಶ ಜಾಧವ, ಸುನೀತಾ ಔಷಧಿ ತಜ್ಞ ಭೀಮರಾವ, ಐರಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.