ADVERTISEMENT

ಹುಣಸಗಿ | ಮಳೆಗೆ ಮನೆಗಳು ಭಾಗಶಃ ಹಾನಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 6:43 IST
Last Updated 19 ಜುಲೈ 2025, 6:43 IST
ಹುಣಸಗಿ ತಾಲ್ಲೂಕಿನ ಮನ್ನಾ ನಾಯಕ್ ತಾಂಡಾದಲ್ಲಿ ಮನೆ ಕುಸಿದಿರುವುದು
ಹುಣಸಗಿ ತಾಲ್ಲೂಕಿನ ಮನ್ನಾ ನಾಯಕ್ ತಾಂಡಾದಲ್ಲಿ ಮನೆ ಕುಸಿದಿರುವುದು   

ಹುಣಸಗಿ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳೆಗೆ ಅಲ್ಲಲ್ಲಿ ಮನೆಗಳು ಭಾಗಶಃ ಕುಸಿದಿವೆ.

ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿ ರೇಣುಕಾ ಸಂಗಣ್ಣ ಎಂಬುವರ ಮನೆ ಚಾವಣಿ ಭಾಗಶಃ ಬಿದ್ದಿದೆ. ತಾಲ್ಲೂಕಿನ ಬರದೇವನಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನ್ನಾ ನಾಯಕ್ ತಾಂಡಾದಲ್ಲಿ ಸವಿತಾ ಮೋತಿಲಾಲ್ ಅವರ ಮನೆ ಬಿದ್ದಿದೆ ಎಂದು ತಿಳಿದುಬಂದಿದೆ.

ಯಡಹಳ್ಳಿ ಗ್ರಾಮದಲ್ಲಿಯೂ ಒಂದು ಮನೆ ಭಾಗಶಃ ಕುಸಿದಿದ್ದು, ಕಂದಾಯ ಅಧಿಕಾರಿಗಳು ಸಮೀಕ್ಷಾ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಶುಕ್ರವಾರ ಸಂಜೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.