ADVERTISEMENT

ಮಾನವೀಯತೆ ಇಂದಿನ ಅಗತ್ಯ: ಪಿಎಸ್‌ಐ ದಿವ್ಯಾ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:29 IST
Last Updated 26 ನವೆಂಬರ್ 2022, 4:29 IST
ನಾರಾಯಣಪುರದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಕೆಡಿಟ್ ತರಬೇತಿಗೆ ಗಣ್ಯರು ಚಾಲನೆ ನೀಡಿದರು. ಪಿಎಸ್ಐ ದಿವ್ಯಾ ಇದ್ದಾರೆ
ನಾರಾಯಣಪುರದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಕೆಡಿಟ್ ತರಬೇತಿಗೆ ಗಣ್ಯರು ಚಾಲನೆ ನೀಡಿದರು. ಪಿಎಸ್ಐ ದಿವ್ಯಾ ಇದ್ದಾರೆ   

ನಾರಾಯಣಪುರ: ‘ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಸಂಪಾದನೆ ಜತೆ ಮಾನವೀಯತೆಯನ್ನೂ ಮೈಗೂಡಿಸಿಕೊಳ್ಳುವದು, ಕಾನೂನಿನ ಅರಿವು ಹೊಂದವದು ಇಂದಿನ ಅಗತ್ಯ’ ಎಂದು ಪಿಎಸ್ಐ ದಿವ್ಯಾ ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಪೊಲೀಸ್ ಕೆಡಿಟ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿನಾಕಾರಣ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುವದು, ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಹಿಂಸೆ, ಮಾನಸಿಕ ಕಿರುಕುಳ, ನಿಂದಿಸುವದು, ಅವಮಾನಿಸುವದು, ಅಶ್ಲೀಲವಾಗಿ ನಡೆದುಕೊಳ್ಳುವರ ಬಗ್ಗೆ ಮುಕ್ತವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೆ ಕಾನೂನು ರೀತಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ದೂರು ನೀಡಿದ ಹೆಣ್ಣು ಮಕ್ಕಳಿಗೆ ಸದಾ ರಕ್ಷಣೆ ಒದಗಿಸಲಾಗುವದು ಹಾಗೂ ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲನೆ ಮಾಡಬೇಕು ಈ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತದೆ, ಇದರಿಂದ ಸಂಭಾವ್ಯ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.

ಉಪಪ್ರಾಚಾರ್ಯ ಶಂಕರ ಲಮಾಣಿ, ಆಂಜನೇಯ ದೊರೆ, ಎಸ್‌ಡಿಎಂಸಿ ಅಧ್ಯಕ್ಷ ಉದಯರಾಜ ಒಣಕುದರಿ, ಸಂಗಣ್ಣ ಹಗರಗುಂಡ, ಶ್ರೀಶೈಲ್, ಜಯಶ್ರೀ ಮೋರಟಗಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳಾದ ದೇವು, ಶಿಕ್ಷಕ ಶಿವಪುತ್ರ, ವಿದ್ಯಾರ್ಥಿನಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.