
ಹುಣಸಗಿ: ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗ ಮಕ್ಕಳಿಗೆ ನೀಡಲಾಗುವ ಪೌಷ್ಟಿಕ ಆಹಾರದ ಮೊಟ್ಟೆ ಹಾಗೂ ಬಾಳೆಹಣ್ಣು ನಿರ್ವಹಣೆಯ ₹ 1.39 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
‘ಪಿಎಂ ಪೋಷಣ ಶಕ್ತಿ ನಿರ್ಮಾಣ ಬಿಸಿ ಊಟದ ಅಡುಗೆ ಕೇಂದ್ರಗಳಿಗೆ ಸರ್ಕಾರ ಮತ್ತು ಎಪಿಎಫ್ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ನೀಡಲಾಗುವ ಎಪಿಎಫ್ ಅನುದಾನವನ್ನು ಶುಕ್ರವಾರ ಬಿಸಿಯೂಟ ನಿರ್ವಹಣೆ ಮುಖ್ಯಶಿಕ್ಷಕರು ಹಾಗೂ ಎಸ್‌ಡಿಎಂಸಿ ಅವರ ಜಂಟಿ ಖಾತೆಗೆ ಜಮಾ ಮಾಡಲಾಗಿದೆ’ ಎಂದು ತಾಲ್ಲೂಕು ಅಧಿಕಾರಿ ಪಂಡೀಪ್ ನಿಂಬೂರೆ ಮಾಹಿತಿ ನೀಡಿದರು.
ಹುಣಸಗಿ ಹಾಗೂ ಸುರಪುರ ತಾಲ್ಲೂಕಿನ 411 ಶಾಲೆಗಳಿಗೆ ಒಟ್ಟು ₹ 1,39,02,644 ಹಣ ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ದಿ.19 ಶುಕ್ರವಾರದ ‘ಪ್ರಜಾವಾಣಿ’ ಯಲ್ಲಿ ಶಾಲಾ ಮುಖ್ಯಶಿಕ್ಷಕರ ಜೇಬಿ ಮೊಟ್ಟೆ ಭಾರ ಎಂಬ ಶಿರ್ಷಿಕೆಯಡಿ ವಿವರವಾದ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಇಲಾಖೆ ಕ್ರಮ ಕೈಗೊಂಡಿದೆ. ತಾಲ್ಲೂಕಿನ ಮುಖ್ಯ ಶಿಕ್ಷಕರಿಗೆ ಈ ವಿಷಯ ನಿರಾಳವಾಗುವಂತೆ ಮಾಡಿದೆ.
‘ಇನ್ನೂ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಹಾಲಿನ ಮಿಶ್ರಣದ ಸಕ್ಕರೆ ಸೇರಿದಂತೆ ಸಾದಿಲ್ವಾರು ಹಣ ಬಿಡುಗಡೆ ಯಾಗಬೇಕಿದೆ’ ಎಂದು ಶಿಕ್ಷಕರು ಸಂಘದ ಅಧ್ಯಕ್ಷ ಕೊಟ್ರೇಶ ಕೋಳೂರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.