ADVERTISEMENT

ಯಾದಗಿರಿ | ಅಕ್ರಮ ಸಾಗಣೆ: 301 ಕ್ವಿಂಟಲ್ ಪಡಿತರ ಅಕ್ಕಿ ವಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:14 IST
Last Updated 19 ನವೆಂಬರ್ 2025, 6:14 IST
ಪಡಿತರ ಅಕ್ಕಿ ಸಾಗಣೆಯಡಿ ಆರೋಪದಡಿ ವಶಕ್ಕೆ ಪಡೆಯಲಾದ ಲಾರಿ
ಪಡಿತರ ಅಕ್ಕಿ ಸಾಗಣೆಯಡಿ ಆರೋಪದಡಿ ವಶಕ್ಕೆ ಪಡೆಯಲಾದ ಲಾರಿ   

ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದಡಿ ಲಾರಿ ಮಾಲೀಕ ಮತ್ತು ಚಾಲಕನ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದ್ದು, 301 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ಪಟ್ಟಣದ ಎಪಿಎಂಸಿ ಗಂಜ್‌ ಆವರಣದಲ್ಲಿ ಲಾರಿಯೊಂದು ನಿಂತಿತ್ತು. ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಲು ದಾಸ್ತಾನು ಮಾಡಿದ್ದಾಗಿ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು. ₹ 10.43 ಲಕ್ಷ ಮೌಲ್ಯದ 301 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT