ADVERTISEMENT

ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರ ಸ್ಮರಣೆ, ಗಣ್ಯರಿಂದ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 14:31 IST
Last Updated 15 ಆಗಸ್ಟ್ 2020, 14:31 IST
ಯಾದಗಿರಿಯ ಬಿಜೆಪಿ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು
ಯಾದಗಿರಿಯ ಬಿಜೆಪಿ ಕಾರ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಕಡೆಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸ್ವಾತಂತ್ರ್ಯ ಸಾವಿರಾರು ಮಹನೀಯರ ತ್ಯಾಗ, ಬಲಿದಾನದಿಂದ ಬಂದಿದೆ ಎಂದು ಗಣ್ಯರು ಸ್ಮರಿಸಿದರು. ವಿವಿಧ ಸಂಘ–ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯ: ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಅನೇಕರು ಮಹಾತ್ಮರು ಬ್ರಿಟಿಷ್ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. 200 ವರ್ಷಗಳ ಸತತ ಹೋರಾಟದ ಫಲವಾಗಿ ದೇಶ ಸ್ವಾತಂತ್ರವಾಗಿದೆ ಎಂದು ಹೇಳಿದರು.

ಈ ವೇಳೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ಖಂಡಪ್ಪ ದಾಸನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದೇವೇಂದ್ರನಾಥ್ ನಾದ, ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮಾ, ನಗರಸಭೆ ಸದಸ್ಯರಾದ ಸುರೇಶ ಅಂಬಿಗೇರ, ಮಾರುತಿ ಕಲಾಲ್, ಕೃಷ್ಣ ನಾಯಕ ಇದ್ದರು.

ADVERTISEMENT

ಜಿಲ್ಲಾ ಕಸಾಪ ಕಚೇರಿ: ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸ್ವಾತಂತ್ರ್ಯದಿನ ಸರಳವಾಗಿ ಆಚರಿಸಲಾಯಿತು.

ಸಾಹಿತಿ ಅಯ್ಯಣ್ಣ ಹುಂಡೇಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಾಂಧೀಜಿಭಾವಚಿತ್ರಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸಿದ್ದಪ್ಪ ಹೊಟ್ಟಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಡಾ.ಎಸ್.ಎಸ್.ನಾಯಕ, ನಾಗಪ್ಪ ಸಜ್ಜನ್, ಬಸವಂತ್ರಾಯಗೌಡ ಮಾಲಿಪಾಟೀಲ, ವೀರಭದ್ರಯ್ಯ ಸ್ವಾಮಿ ಜಾಕಾಮಠ, ರಾಜು, ನಾಗೇಂದ್ರ ಜಾಜಿ, ಬಾಲರಾಜ ನಕ್ಕಲ್, ಸಂಗಣ್ಣ ಹೋತಪೇಟೆ, ಅನಿಲ್ ಗುರೂಜಿ, ಮಲ್ಲಪ್ಪ ಹಳಕಟ್ಟಿ, ಅಬ್ದುಲ್ ಸಲೀಂ ಸಾಬ ಐಕೂರು ಇದ್ದರು.

ವೀರ ನಿಕೇತನ: ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಡಾ.ಸಿದ್ದಪ್ಪ ಹೊಟ್ಟಿ, ರಾಚಣ್ಣಗೌಡ ಮುದ್ನಾಳ, ನಾಗಪ್ಪ ಬೆನಕಲ್, ಗುಂಡೇರಾವ್ ಪಂಚಾಹತ್ರಿ, ನೀಲಕಂಠ ಶೀಲವಂತ, ಸುಭಾಷ ಮಾಳಿಕೇರಿ, ಬಲವಂತ ದಾಸನಕೇರಿ, ಮೋಹನ ಬಾಬು, ಅನೀಲ್ ಗುರೂಜಿ, ಸೈಯದ್ ಗೌಸ್ ಚೌದ್ರಿ, ಅನಿಲ್ ಕರಾಟೆ, ಇದ್ದರು.

ಸರ್ಕಾರಿ ಪ್ರೌಢಶಾಲೆ (ಅರಕೇರಾ ಕೆ.): ಮುಖ್ಯಶಿಕ್ಷಕಿ ನಿವೇದಿತಾ ಪಟ್ಟೇದಾರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಎಸ್‌ಡಿಎಂಸಿ ಅಧ್ಯಕ್ಷ ಭೋಜಣ್ಣಗೌಡ, ಶಿಕ್ಷಕರಾದ ಮುರಳಿ, ವೆಂಕಟಪ್ಪ, ಶೈಲಜಾ, ಕವಿತಾ, ಸಾವಿತ್ರಿ ಇದ್ದರು.

ಜನತಾ ಟ್ರಸ್ಟ್ ಜಿಲ್ಲಾ ಘಟಕ: ಜನತಾ ಟ್ರಸ್ಟ್ ವತಿಯಿಂದ ನಗರದ ಕುಷ್ಟರೋಗಿಗಳ ಜೀವನಜ್ಯೋತಿ ಕಾಲೊನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಸ್ಟ್ ಜಿಲ್ಲಾ ಸಂಚಾಲಕ ಹನುಮಂತ್ರಾಯಗೌಡ ಮಾಲಿಪಾಟೀಲಧ್ವಜಾರೋಹಣ ನೆರವೇರಿಸಿದರು. ಗಾಂಧೀಜಿ ಭಾವಚಿತ್ರಕ್ಕೆ ಅಭಿಷೇಕ ದಾಸನಕೇರಿ ಪೂಜೆ ಸಲ್ಲಿಸಿದರು. ಯುವ ಬ್ರಿಗೇಡ್ ವಿಭಾಗೀಯ ಸಂಚಾಲಕ ಸಂಗಮೇಶ ಕೆಂಭಾವಿ, ಜಿಲ್ಲಾ ಸಂಪರ್ಕ ಪ್ರಮುಖ ವೆಂಕಟೇಶ ಕಲ್ಬುರ್ಗಿ, ನವ ಗಿರಿನಾಡು ಸಂಸ್ಥೆ ಅಧ್ಯಕ್ಷ ಯೇಸುಮಿತ್ರಾ, ಕುರುಬ ಸಮಾಜದ ಯುವ ಮುಖಂಡ ಹರೀಶ ಕುಮಾರ ಪೂಜಾರಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಸವಿತಾ ಸಮಾಜ: ನಗರದ ಸವಿತಾ ಸಮಾಜ ಮೈಲಾಪುರ ಅಗಸಿ ಸಮುದಾಯ ಭವನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.ನಾಗಪ್ಪ ಹತ್ತಿಕುಣಿ, ಮಲ್ಲಣ್ಣ ವಡಿಗೇರಿ, ಈಶಪ್ಪ ಬಸವನಗುಡಿ, ಶ್ರೀನಿವಾಸ ಕಲ್ಮನಿ, ಗೋಪಾಲ ಕಿಲ್ಲೇದ್, ಶಂಕರ ಕಲ್ಮನಿ, ಬಾಬು ಪರಶುರಾಮ, ಸಮಾಜದವರು ಇದ್ದರು.

ಜಯ ಕರ್ನಾಟಕ ಸಂಘಟನೆ: ಗುರುಮಠಕಲ್ ತಾಲ್ಲೂಕುಜಯ ಕರ್ನಾಟಕ ಸಂಘಟನೆ ವತಿಯಿಂದ ಧ್ವಜಾರೋಹಣ ನೆರವೇರಿಸಲಾಯಿತು.ತಾಲ್ಲೂಕು ಘಟಕದ ಧ್ಯಕ್ಷ ನಾಗೇಶ ಗದ್ದಿಗಿ ನೇತೃತ್ವದಲ್ಲಿ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ್ ನಾಯಕ,ಜಿಲ್ಲಾ ಉಪಾಧ್ಯಕ್ಷ ಶಿವರಾಜ್ ಗುತ್ತೇದಾರ, ಮಾರುತಿ ಮುದ್ನಾಳ, ವಿಶಾಲ, ಯಲ್ಲಪ್ಪ ಭೂತಾ, ಕಾರ್ಯಾಧ್ಯಕ್ಷ ಲಾಲಪ್ಪ ತಲಾರಿ, ಯುವ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಮೇಧಾ, ನೂತನ ಮಹಿಳಾ ಘಟಕದ ಅಧ್ಯಕ್ಷೆಅನುಸೂಯ, ಸುಹಾಸಿನಿ ಇದ್ದರು.

ವನದುರ್ಗಾ ಆರೋಗ್ಯ ಕೇಂದ್ರ: ಶಹಾಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವನದುರ್ಗಾದಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಗುತ್ತೇದಾರ್, ಕಿರಿಯ ಆರೋಗ್ಯ ಸಹಾಯಕ ಮಲ್ಲೇಶ ಕುರುಕುಂದ, ಗೋಪಾಲರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.