ADVERTISEMENT

ಕೃಷ್ಣಾ ನದಿ ಒಳಹರಿವು, ಹೊರಹರಿವು ಹೆಚ್ಚಳ; ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 6:51 IST
Last Updated 9 ಆಗಸ್ಟ್ 2022, 6:51 IST
ಕೃಷ್ಣಾ ನದಿಗೆ ನೀರು ಹರಿಸುತ್ತಿರುವ ದೃಶ್ಯ
ಕೃಷ್ಣಾ ನದಿಗೆ ನೀರು ಹರಿಸುತ್ತಿರುವ ದೃಶ್ಯ   

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸುವ ಹೊರ ಹರಿವು ಹೆಚ್ಚಳವಾಗಿದೆ. ಒಳಹರಿವು ಹೆಚ್ಚಳವಾಗಿದ್ದು, ಅದಕ್ಕೆ ತಕ್ಕಂತೆ ನದಿಗೆ ಹರಿಬಿಡಲಾಗುತ್ತಿದೆ.

ನಾರಾಯಣಪುರ ಜಲಾಶಯಕ್ಕೆ ಮಂಗಳವಾರ 1.15 ಲಕ್ಷ ಕ್ಯುಸೆಕ್ ಒಳಹರಿವು‌ ಇದ್ದು, 1.21 ಲಕ್ಷ ಕ್ಯುಸೆಕ್ ಹೊರ ಹರಿವು ಇದೆ.

16 ಕ್ರಸ್ಟ್ ಗೇಟುಗಳ ಮೂಲಕ 1.30 ಅಂತರ ಮೀಟರ್ ಗೇಟುಗಳನ್ನು ಎತ್ತರಿಸಲಾಗಿದೆ. 1,15,744 ಕ್ಯುಸೆಕ್ ನೀರು ಕೃಷ್ಣಾ ನದಿಗೆ, 6,000 ಕ್ಯುಸೆಕ್ ನೀರು ಮುರುಡೇಶ್ವರ ವಿದ್ಯುತ್ ಸ್ಥಾವರಕ್ಕೆ ಹರಿಸಲಾಗುತ್ತಿದೆ. ಮಂಗಳವಾರ 491.68 ಮಟ್ಟ ಕಾಯ್ದಯಕೊಂಡಿದ್ದು, ಪ್ರಸ್ತುತ 30.699 ಟಿಎಂಸಿ ಸಂಗ್ರಹ ಇದೆ.

ADVERTISEMENT

ಎಚ್ಚರಿಕೆ ಸಂದೇಶ:ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವ ಕಾರಣ ಆಲಮಟ್ಟಿ ಆಣೆಕಟ್ಟಿನಿಂದ ಹೊರಹರಿವು ಹೆಚ್ಚಿದ್ದರಿಂದ ನಾರಾಯಣಪುರ ಆಣೆಕಟ್ಟಿನಿಂದ ಕೃಷ್ಣಾ ನದಿಗೆ ಹೊರಹರಿವಿನ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸಲಾಗಿದೆ.

ನಾರಾಯಣಪುರ ಆಣೆಕಟ್ಟಿಗೆ ಒಳಹರಿವಿನ ಆಧಾರದ ಮೇಲೆ ಮತ್ತಷ್ಟು ಹೆಚ್ಚಿಸಲಾಗುವುದು.ನದಿ ಪಾತ್ರದ ಗ್ರಾಮಸ್ಥರು ನದಿಗೆ ಇಳಿಯದಂತೆ ಡ್ಯಾಂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.