ADVERTISEMENT

ಸುರಪುರ: ಜೆಇ ಮನೆಯಲ್ಲಿ ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 20:34 IST
Last Updated 3 ಡಿಸೆಂಬರ್ 2025, 20:34 IST
   

ಸುರಪುರ (ಯಾದಗಿರಿ ಜಿಲ್ಲೆ): ಇಲ್ಲಿನ ನಗರಸಭೆಯ ಕಿರಿಯ ಎಂಜಿನಿಯರ್‌ (ಜೆಇ) ಮಹೇಶ ಶಿವಾನಂದ ಅವರ ಮನೆ ಅಲ್ಮೇರಾದಲ್ಲಿ ಇರಿಸಿದ್ದ ₹ 40 ಸಾವಿರ ನಗದು, ₹ 46.11 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.

ಮಹೇಶ ತನ್ನ ಸಹೋದರನ ಜೊತೆಗೂಡಿ ಸತ್ಯಂಪೇಟೆ ರಸ್ತೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ‘ಮಂಗಳವಾರ ರಾತ್ರಿ ನಗರ ದಿವಳಗುಡ್ಡದ ಮರಗಮ್ಮ ದೇವಿಯ ಜಾತ್ರೆಗಾಗಿ ಕುಟುಂಬದ ಸದಸ್ಯರು ತೆರಳಿದ್ದರು.

‘ಬಾಗಿಲಿನ ಕೀಲಿ ಕೊಂಡಿ ಮುರಿದು ಕೃತ್ಯ ಎಸಗಿದ್ದು ₹ 40 ಸಾವಿರ ನಗದು, 642 ಗ್ರಾಂ ತೂಕದ  ಚಿನ್ನದ ಆಭರಣ, 1,295 ಗ್ರಾಂ ಬೆಳ್ಳಿ ಆಭರಣ ಕಳುವಾಗಿದೆ’ ಎಂದು ಸುರಪುರ ಠಾಣೆಗೆ ದೂರು ನೀಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.