ADVERTISEMENT

ಗುರುಮಠಕಲ್‌| ಪತ್ರಕರ್ತರ ಸಂಘಕ್ಕೆ ಎಂ.ಟಿ.ಪಲ್ಲಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:14 IST
Last Updated 11 ಜನವರಿ 2026, 6:14 IST
ಗುರುಮಠಕಲ್‌ ಪಟ್ಟಣದಲ್ಲಿ ಪತ್ರಕರ್ತರ ಧ್ವನಿ ಸಂಘಟನೆಗೆ ಆಯ್ಕೆಯಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಮಾರ್ಗದರ್ಶಕರನ್ನು ಶನಿವಾರ ಸ್ನೇಹಿತರ ಬಳಗದಿಂದ ಸನ್ಮಾನಿಸಲಾಯಿತು 
ಗುರುಮಠಕಲ್‌ ಪಟ್ಟಣದಲ್ಲಿ ಪತ್ರಕರ್ತರ ಧ್ವನಿ ಸಂಘಟನೆಗೆ ಆಯ್ಕೆಯಾದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಮಾರ್ಗದರ್ಶಕರನ್ನು ಶನಿವಾರ ಸ್ನೇಹಿತರ ಬಳಗದಿಂದ ಸನ್ಮಾನಿಸಲಾಯಿತು    

ಗುರುಮಠಕಲ್‌: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ಕೆಡಬ್ಲೂಜೆವಿ) ಸಂಘ ತಾಲ್ಲೂಕು ಘಟಕಕ್ಕೆ ಅಧ್ಯಕ್ಷರಾಗಿ ರವಿ ಬುರನೋಳ ಎಂ.ಟಿ.ಪಲ್ಲಿ ಆಯ್ಕೆಯಾಗಿದ್ದಾರೆ.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜು ಬಂಗ್ಲೆ ಅವರು, ತಾಲ್ಲೂಕು ಘಟಕಕ್ಕೆ ರವಿ ಬುರನೋಳ ಎಂ.ಟಿ.ಪಲ್ಲಿ(ಅಧ್ಯಕ್ಷ) ಹಾಗೂ ಜಗದೀಶಕುಮಾರ ಭೂಮ(ಪ್ರಧಾನ ಕಾರ್ಯದರ್ಶಿ) ಅವರ ಆಯ್ಕೆಯಾದ ಕುರಿತು ಪ್ರಮಾಣಪತ್ರ ನೀಡಿದ್ದು, ಸಂಘದ ಸಿದ್ಧಾಂತದಂತೆ ಪತ್ರಕರ್ತರ ಮತ್ತು ಸಮಾಜದ ಶ್ರೇಯಸ್ಸಿಗೆ ಸಂಘಟನೆಯ ನಿಯಮಾನುಸಾರ ಕಾರ್ಯನಿರ್ವಹಿಸಲು ನಿರ್ದೇಶನ ನೀಡಿದ್ದಾರೆ.

ಸನ್ಮಾನ: ನೂತನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದವರಿಗೆ ಶನಿವಾರ ಪತ್ರಕರ್ತರ ಮತ್ತು ಸ್ನೇಹಿತರ ಬಳಗದಿಂದ ಸನ್ಮಾನಿಸಲಾಯಿತು.

ADVERTISEMENT

ಪುರಸಭೆ ಮಾಜಿ ಸದಸ್ಯರಾದ ಕೆ.ದೇವದಾಸ, ಆಶನ್ನ ಬುದ್ಧ, ರಮೇಶಗೌಡ, ಲಿಂಗಪ್ಪ ತಾಂಡೂರ್ಕರ್,‍ ವರದಿಗಾರರಾದ ಎಂ.ಬಿ.ನಾಯ್ಕಿನ್‌, ಬಸಪ್ಪ ಸಂಜನೋಳ, ಬಸವರಾಜ ಅಲೇಮನಿ, ಲಕ್ಷ್ಮಣ, ಸಾಬಪ್ಪ ಕೆ.ಚಪೆಟ್ಲಾ, ಹೈಮದ್‌, ಜಾವೇದ್‌, ಮುಖಂಡ ಲಾಲಪ್ಪ ತಲಾರಿ ಸೇರಿದಂತೆ ಬಳಗ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.