
ಹುಣಸಗಿ ಪಟ್ಟಣ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯಲ್ಲಿ ತಹಶೀಲ್ದಾರ್ ಎಂ.ಬಸವರಾಜ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಹುಣಸಗಿ: ‘ದಾಸ ಸಾಹಿತ್ಯಕ್ಕೆ ಅತ್ಯಂತ ಶೇಷ್ಠ ಕೀರ್ತನೆಗಳನ್ನು ಕನಕದಾಸರು ಕೊಡುಗೆಯಾಗಿ ಕೊಟ್ಟಿದ್ದಾರೆ’ ಎಂದು ತಹಶೀಲ್ದಾರ್ ಎಂ.ಬಸವರಾಜ ಹೇಳಿದರು.
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
‘ಕೀರ್ತನೆ ಹಾಗೂ ಮುಂಡಿಗೆಗಳ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಕನಕದಾಸರು ದೇಶ ಕಂಡ ಶ್ರೇಷ್ಠ ದಾಸರು’ ಎಂದು ಬಣ್ಣಿಸಿದರು.
ಬಳಿಕ ಪಟ್ಟಣದ ಬಸವೇಶ್ವರ ವೃತ್ತದಿಂದ ಕನಕದಾಸರ ವೃತ್ತದ ವರೆಗೆ ತೆರೆದ ವಾಹನದಲ್ಲಿ ನಾಮಫಲಕದ ಭವ್ಯ ಮೆರವಣಿಗೆ ನಡೆಯಿತು.
ಮಾಳಳ್ಳಿಯ ಕೆಂಚರಾಯಪ್ಪ ಮುತ್ಯಾ, ಪಶುವೈದ್ಯಾಧಿಕಾರಿ ಡಾ. ಮಹಿಬೂಬಸಾಬ ಖಾಜಿ, ಮುಖಂಡರಾದ ರವಿ ಕುಲಕರ್ಣಿ, ರಂಗಪ್ಪ ಡಂಗಿ, ಭೀಮನಗೌಡ ಪಾಟೀಲ್, ಪರಮಣ್ಣ ನೀಲಗಲ್ಲ, ಹಳ್ಳಪ್ಪ ಮಾಸ್ತರ್, ಗ್ರಾಪಂ ಸದಸ್ಯ ಬಸವರಾಜ ಮೇಟಿ, ಗುರು ಹುಲಕಲ್, ಅಂಬರೀಷ್ ಮಾಲಗತ್ತಿ, ಕಾಂತೇಶ್ ಹಲಗಿಮನಿ ಇದ್ದರು. ವೆಂಕಟೇಶ್ ನಿರೂಪಿಸಿದರು. ಅರವಿಂದ ಸ್ವಾಗತಿಸಿದರು. ರವಿಕುಮಾರ್ ವಂದಿಸಿದರು.
ಸಹಕಾರ ಸಂಘ: ಹುಣಸಗಿ ಪಟ್ಟಣ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಬಸವರಾಜ ಮೇಲಿನಮನಿ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಸಂತ ಕನಕದಾಸರು, ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿ ಭಕ್ತಿ ಪಂಥದ ಕೀರ್ತನೆಗಳು ಸಾರುತ್ತಾ ಸಮಾಜ ಪರಿವರ್ತನೆಗೆ ಶ್ರಮಿಸಿದ ಶ್ರೇಷ್ಠ ಸಂತರು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಅಮರೇಶ ವೈಲಿ, ಚಂದ್ರಶೇಖರ ದೇಸಾಯಿ, ಗುರಲಿಂಗಣ್ಣ ಸಜ್ಜನ್, ಮನೋಹರ ಪತ್ತಾರ, ಬಸವರಾಜ ಸಜ್ಜನ್, ಮಲ್ಲಣ್ಣ ಡಂಗಿ, ಪ್ರದೀಪ್ ಮಿರಜಕರ್, ಪ್ರಭು ನೂಲಿನ್, ಶಿವಕುಮಾರ ಗೋಗಿ ಇದ್ದರು.
ಪಟ್ಟಣದ ಸ್ಪಂದನ ಪಬ್ಲಿಕ್ ಶಾಲೆಯಲ್ಲಿ ಸಂತ ಕನಕದಾಸರ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕಿ ಶಾರದಾ ದೊಡ್ಡಮನಿ, ವಿಜಯಲಕ್ಷ್ಮಿ ಪಾಟೀಲ್, ಪ್ರಮೀಳಾ ನೂಲಿನ್, ಜಯಶ್ರೀ ಮಡಿವಾಳರ, ಆಸ್ಮಾ, ವನಿತಾ ರಾಠೋಡ್, ನೀಲಾಶ್ರೀ ನಾಲ್ವರ್, ಕಾವೇರಿ ಪಾಟೀಲ್, ತೇಜಸ್ವಿನಿ ಗುತ್ತೇದಾರ್, ಭಾಗ್ಯಶ್ರೀ, ಸೌಮ್ಯ, ಕೌಸರ್ ಬೇಗಂ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.