
ಪ್ರಜಾವಾಣಿ ವಾರ್ತೆ
ಕೆಂಭಾವಿ: ‘ಸಮಾಜದಲ್ಲಿರುವ ಮೇಲು-ಕೀಳು, ಜಾತಿ-ಮತಗಳ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಧ್ವನಿ ಎತ್ತಿ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದ ಮಹಾನ್ ಸಂತ ಕನಕದಾಸರು. ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು’ ಎಂದು ಖಂಡಪ್ಪ ತಾತ ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕರೆಪ್ಪ ಕಾಡಪ್ಪಗೊಳ, ನಿಂಗಪ್ಪ ಗೌಡಗೇರಿ, ಕರೆಪ್ಪ ದಿಡ್ಡಿ, ನಾಗಪ್ಪ ದಿಡ್ಡಿ, ಶಾಂತಪ್ಪ ದಿಡ್ಡಿ, ನಾಗಪ್ಪ ಮಾನಪ್ಪಗೊಳ, ಬಸಪ್ಪ ಗರನೋರ, ಶರಣಗೌಡ ಹುಲಿಕಂಠಿ, ಬಸಪ್ಪ ಕೊಳಲಭಾವಿ, ನಾಗಪ್ಪ ತೇಲಗರು, ತಿಪ್ಪಣ್ಣ ಬಂದಡ್ಡಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.