ADVERTISEMENT

ವಡಗೇರಾ: 14ರಂದು ಕನ್ನಡ ಸಾಂಸ್ಕೃತಿಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 13:24 IST
Last Updated 12 ಡಿಸೆಂಬರ್ 2023, 13:24 IST
ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಯಾದಗಿರಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಚೌಡಯ್ಯ ಬಾವುರ ಮಾತನಾಡಿದರು
ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಯಾದಗಿರಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಚೌಡಯ್ಯ ಬಾವುರ ಮಾತನಾಡಿದರು   

ವಡಗೇರಾ: ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಕರವೇ ಗ್ರಾಮ ಘಟಕದ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಡಿ.14 ರಂದು ಸಂಜೆ 5ಗಂಟೆಗೆ ಕನ್ನಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಚೌಡಯ್ಯ ಬಾವುರ ಹೇಳಿದರು.

ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ  ಅವರು ಮಾತನಾಡಿದರು.

ರಾಜ್ಯೋತ್ಸವದಲ್ಲಿ ಮಠಾಧೀಶರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ADVERTISEMENT

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಣಮಂತ್ರಾಯ ತೇಕರಾಳ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬಸವರೆಡ್ಡಿಗೌಡ ಹಬಸಿಹಾಳ, ತಾಲ್ಲೂಕು ಉಪಾಧ್ಯಕ್ಷ ಸಿದ್ದು ಪೂಜಾರಿ ತುಮಕೂರು, ಗ್ರಾಮ ಘಟಕ ಅಧ್ಯಕ್ಷ ವಿನೋದ್ ಸಾಹುಕಾರ, ಯುವ ಘಟಕದ ಅಧ್ಯಕ್ಷ ಶರಣು ಅಂಗಡಿ, ಉಪಾಧ್ಯಕ್ಷ ಬಂದೇಶ ವಿಶ್ವಕರ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಜಾಫರ್, ಸಿದ್ದು ಸುಣಗಾರ, ಬಸವಲಿಂಗ ಗುರುಸಣಗಿ, ರಮೇಶ್ ದೇವರೆಡ್ಡಿ, ಸುರೇಶ್ ಬಾಡದ, ಬಸವರಾಜ ದೊರೆ, ಪರಶುರಾಮ ಛಲವಾದಿ, ಬಸುಗೌಡ ಮಸರಕಲ್, ಸುರೇಶ ಕಲಾಲ್, ದೇವು, ವೆಂಕಟೇಶ ಹೂಗಾರ್, ವೆಂಕಟೇಶ್ ಮಾಚನೂರ, ಸಂಗಾರೆಡ್ಡಿ, ವೆಂಕಟೇಶ್ ಕಲಾಲ್, ಸತೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.